ADVERTISEMENT

ಅಮೆರಿಕ ಯುದ್ಧ ನಿಲ್ಲಿಸಬೇಕು: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 21:18 IST
Last Updated 1 ಮಾರ್ಚ್ 2026, 21:18 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬಾಳೆಹೊನ್ನೂರು (ಚಿಕ್ಕಮಗಳೂರು): ‘ಅಮೆರಿಕ– ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಭಾರತ ಸಂದೇಶ ನೀಡಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬಾಳೆಹೊನ್ನೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಯುದ್ಧದಿಂದ ಭಾರತಕ್ಕೂ ದೊಡ್ಡ ಗಂಡಾಂತರ ಬಂದಿದೆ. ಭಾರತೀಯರು ಎಲ್ಲರೂ ಸೇರಿ ಒಟ್ಟಾಗಿ ಸಂದೇಶ ಕೊಡಬೇಕಾದ ಅಗತ್ಯವಿದೆ. ಅಮೆರಿಕ ಯುದ್ಧ ನಿಲ್ಲಿಸಬೇಕು, ಶಾಂತಿ ಮಾತುಕತೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಭಾರತದ ಪ್ರಜೆಗಳ ದುಡಿಮೆಯಿಂದ ಸೌದಿ ಅರೇಬಿಯ ಬದುಕುತ್ತಿದೆ. ದೇಶದ ಜನ ಅದರಲ್ಲೂ ದಕ್ಷಿಣ ಭಾರತದವರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿ ಯುತ್ತಿದ್ದಾರೆ. ಆ ದೇಶ‌ಕ್ಕೂ ಆದಾಯ ತಂದು ಕೊಡುತ್ತಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಅಗತ್ಯ ಇಂದು ಇದೆ’ ಎಂದರು. 

ADVERTISEMENT

‘ನಾವೆಲ್ಲರೂ ಶಾಂತಿ ಬಯಸಬೇಕು. ಆ ಮೂಲಕವೇ ಜನರನ್ನು ಉಳಿಸಿಕೊಳ್ಳಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೂ ಒತ್ತಾಯ ಮಾಡುತ್ತೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.