ADVERTISEMENT

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಎರಡು ತಿಂಗಳಲ್ಲಿ ₹15 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ದಕ್ಷಿಣ ಭಾರತದ ನಾಗಾರಾಧನೆಯ ಹೆಸರಾಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025ರ ನವಂಬರ್, ಡಿಸೆಂಬರ್ ತಿಂಗಳಲ್ಲಿ ಒಟ್ಟು ₹14.77ಕೋಟಿ ಆದಾಯ ಬಂದಿದೆ.

ನವೆಂಬರ್‌ನಲ್ಲಿ ವಿವಿಧ ಸೇವೆಗಳಿಂದ ₹4.56 ಕೋಟಿ, ಹುಂಡಿಯಿಂದ ₹1.09 ಕೋಟಿ ಹಾಗೂ ಅನ್ನದಾನ ನಿಧಿಯಿಂದ ₹83.57 ಲಕ್ಷ ಆದಾಯ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ ₹5.30ಕೋಟಿ, ಹುಂಡಿಯಿಂದ ₹1.90 ಕೋಟಿ, ಅನ್ನದಾನ ನಿಧಿಯಿಂದ ₹1.07‌ ಕೋಟಿ ಆದಾಯ ಬಂದಿದೆ. ‘ಉಳಿದಂತೆ, ವಸತಿಗೃಹ ಹಾಗೂ ಇತರ ಮೂಲಗಳಿಂದ ಬಂದ ಆದಾಯವೂ ಇದರಲ್ಲಿ ಸೇರಿದೆ’ ಎಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT