ದಾವಣಗೆರೆ: ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ‘ವಂದೇ ಭಾರತ್’ ರೈಲು ತಾಂತ್ರಿಕ ತೊಂದರೆಯಿಂದ ದಾವಣಗೆರೆ ಸಮೀಪ ಬುಧವಾರ 45 ನಿಮಿಷ ನಿಲುಗಡೆ ಮಾಡಿತ್ತು.
ಬೆಂಗಳೂರಿನಿಂದ ಬೆಳಿಗ್ಗೆ 9.15 ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲು 10.20ಕ್ಕೆ ತಲುಪಿತು. ರೈಲು ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿ ಬಹು ಹೊತ್ತು ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
‘ರೈಲು ನಿಲ್ದಾಣಕ್ಕೆ ಬರುವ ಮುನ್ನ ‘ವಂದೇ ಭಾರತ್’ ಹಳಿ ಬದಲಾವಣೆ ಮಾಡುತ್ತದೆ. ಹೀಗೆ ಹಳಿ ಬದಲಿಸಲು ಹಸಿರು ನಿಶಾನೆ ಲಭ್ಯವಾಗದ ಪರಿಣಾಮ ತೋಳಹುಣಸೆ ಸಮೀಪ ರೈಲು ನಿಲುಗಡೆ ಮಾಡಿತ್ತು. ತಾಂತ್ರಿಕ ಸಮಸ್ಯೆ ಪರಿಹಾರವಾದ ಬಳಿಕ ಸಂಚಾರ ಮುಂದುವರಿಸಿತು’ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.