ಬೈಂದೂರು (ಉಡುಪಿ): ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದ ಕಂಬಳದ ದೃಶ್ಯವೊಂದರಲ್ಲಿ ಬಳಸಿಕೊಂಡಿದ್ದ ಬೊಳಂಬಳ್ಳಿ ಪರಮೇಶ್ವರ ಭಟ್ ಮಾಲೀಕತ್ವದ ಅಪ್ಪು ಹಾಗೂ ಕಿಟ್ಟು ಹೆಸರಿನ ಕೋಣಗಳಲ್ಲಿ ಅಪ್ಪು (16) ಹೆಸರಿನ ಕೋಣ ಶುಕ್ರವಾರ ಮೃತಪಟ್ಟಿದೆ.
ಬೆಂಗಳೂರಿನ ಅರಮನೆ ಮೈದಾನ ಆವರಣದಲ್ಲಿ 2023ರ ವೆಂಬರ್‌ನಲ್ಲಿ ನಡೆದ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಈ ಕೋಣಗಳು 6.5 ಕೋಲು ಎತ್ತರದ ನಿಶಾನೆಗೆ ನೀರು ಚಿಮ್ಮಿಸಿ ಚಿನ್ನದ ಪದಕ ಗೆದ್ದಿದ್ದವು.
ಅಲ್ಲದೆ ಕರಾವಳಿ ಭಾಗಗಳಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಕಂಬಳಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿತ್ತು. ಕೊನೆಯದಾಗಿ ಹೊಸಾಡು ಗ್ರಾಮದ ಮಳ್ಳಿಕಟ್ಟೆಯ ನಗುಸಿಟಿಯಲ್ಲಿ ಜರುಗಿದ ರೈತೋತ್ಸವದ ಜೋಡುಕೆರೆ ಕಂಬಳದಲ್ಲಿ ಭಾಗವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.