ADVERTISEMENT

ರೈಲ್ವೆ ಇಲಾಖೆಯಲ್ಲಿ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿಗಳಿಂದ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ: ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2024, 10:16 IST
Last Updated 11 ಮಾರ್ಚ್ 2024, 10:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಒಟ್ಟು 9,144 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಇದೇ ಮಾರ್ಚ್ 9ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಏಪ್ರಿಲ್ 8 ಅರ್ಜಿ ಸಲ್ಲಿಸಲು ಕಡೆಯ ದಿನ. ಈ ಕುರಿತು ರೈಲ್ವೆ ಇಲಾಖೆ ಇತ್ತೀಚೆಗೆ ಕೇಂದ್ರಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ADVERTISEMENT

‘ಟೆಕ್ನಿಷಿಯನ್ ಗ್ರೇಡ್–1’ (ಸಿಗ್ನಲ್) 1092 ಹಾಗೂ ‘ಟೆಕ್ನಿಷಿಯನ್ ಗ್ರೇಡ್–3’ 8052 ಹುದ್ದೆಗಳಿದ್ದು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.

ಟೆಕ್ನಿಷಿಯನ್ ಗ್ರೇಡ್–1 ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18ರಿಂದ 36, ಟೆಕ್ನಿಷಿಯನ್ ಗ್ರೇಡ್–3 ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18ರಿಂದ 33 ಇದೆ. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ₹500, ಎಸ್‌,ಸಿ/ ಎಸ್‌ಟಿ, ಇತರೆ ವರ್ಗದವರಿಗೆ ₹250.

ಟೆಕ್ನಿಷಿಯನ್ ಗ್ರೇಡ್–1 ಹುದ್ದೆಗಳಿಗೆ ನಿಗದಿತ ವಿಷಯದೊಂದಿಗೆ ಬಿ.ಎಸ್ಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಅಥವಾ ನಿಗದಿತ ವಿಷಯದಲ್ಲಿ ಎಂಜನಿಯರಿಂಗ್ ಪದವಿ ಹೊಂದಿರಬೇಕು.

ಟೆಕ್ನಿಷಿಯನ್ ಗ್ರೇಡ್–3 (ಬ್ಲ್ಯಾಕ್‌ಸ್ಮಿತ್, ಬ್ರಿಡ್ಜ್, ಕ್ಯಾರೇಜ್ ಆ್ಯಂಡ್ ವ್ಯಾಗನ್, ಕ್ರೇನ್ ಡ್ರೈವರ್, ಎಲೆಕ್ಟ್ರಿಷಿಯನ್‌) ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಜೊತೆಗೆ ನಿಗದಿತ ವಿಷಯಗಳೊಂದಿಗೆ ಐಟಿಐ ಪಾಸಾಗಿರಬೇಕು. ಕೋರ್ಸ್‌ನ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ನೇಮಕಾತಿ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ನಂತರ ದಾಖಲೆಗಳ ತಪಾಸಣೆ ಹಾಗೂ ಕೊನೆಯದಾಗಿ ಮೆಡಿಕಲ್ ಟೆಸ್ಟ್ ಇರಲಿದೆ.

ರೈಲ್ವೆ ನೇಮಕಾತಿ ಮಂಡಳಿಗಳಿಂದ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಯಾ ರಾಜ್ಯಗಳ ಅಭ್ಯರ್ಥಿಗಳು ಸಂಬಂಧಿಸಿದ ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟಿಗೆ ಹೋಗಿ (ಬೆಂಗಳೂರುwww.rrbbnc.gov.in) ಹುದ್ದೆಗಳ ವರ್ಗೀಕರಣ, ಪರೀಕ್ಷೆ ವಿಧಾನ, ಪರೀಕ್ಷೆ ಪಠ್ಯಕ್ರಮ, ಅರ್ಜಿ ಸಲ್ಲಿಕೆಗಾಗಿ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವಿವರವಾದ ಅಧಿಸೂಚನೆ (ಸಿಇಎನ್) ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.