ADVERTISEMENT

ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕತೆಗೆ ಪುಳಕಗೊಂಡ ನಟಿ ಅಮೂಲ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 6:41 IST
Last Updated 9 ಫೆಬ್ರುವರಿ 2026, 6:41 IST
<div class="paragraphs"><p>ಕಾಶಿ ವಿಶ್ವನಾಥ&nbsp;ದೇವಾಲಯಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ</p></div>

ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ

   

ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಸ್ನೇಹಿತರ ಜತೆ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಅಮೂಲ್ಯ ಅವರು ಕಾಶಿಗೆ ಭೇಟಿ ನೀಡಿದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಕಾಶಿಗೆ ಹೋಗಬೇಕೆಂದು ನೀವು ಯೋಜಿಸುವುದಿಲ್ಲ. ಕಾಶಿಯೇ ನಿಮ್ಮನ್ನು ಅಲ್ಲಿಗೆ ಬರಮಾಡಿಕೊಳ್ಳುತ್ತದೆ. ಅದೇ ರೀತಿಯ ಅನುಭವ ನನ್ನ ಜೀವನದಲ್ಲೂ ನಡೆಯಿತು. ಅಲ್ಲಿಗೆ ಹೋದ ಮೇಲೆ ನಾನು ಕೂಡ ಭಕ್ತಳಾಗಿ ಪರಿವರ್ತಿತಳಾಗಿದ್ದೇನೆ. ಒಂದು ದೈವಿಕ ಶಕ್ತಿ ನನ್ನನ್ನು ಮುನ್ನಡೆಸಿ, ಅಪೂರ್ವವಾದ ಸ್ಪರ್ಶ ದರ್ಶನದ ಅನುಭವವಾಯಿತು. ನನ್ನ ಮಾತು ಕೇಳಲ್ಪಟ್ಟಂತಾಗಿ ನಾನು ಸುರಕ್ಷಿತಳಾಗಿದ್ದೇನೆ ಎಂದು ಭಾಸವಾಯಿತು. ಅವನು (ದೇವರು) ನನ್ನ ಕೈ ಹಿಡಿದು ನಡೆಸುತ್ತಿದ್ದಾನೆ ಎಂಬ ಅನುಭವವಾಯಿತು’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಅಮೂಲ್ಯ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ‘ಕಾಶಿಯಲ್ಲಿ ಜರುಗುವ ಗಂಗಾರತಿ. ಅಸ್ತಿಘಾಟ್‌ನಲ್ಲಿ ಗಂಗಾನದಿಗೆ ಪಂಡಿತರು ಸಲ್ಲಿಸುವ ಪೂಜೆ, ದೋಣಿ ವಿಹಾರದಲ್ಲಿ ಕಾಶಿ ದೇವಾಯಲದ ಪರಿಸರವನ್ನು ಆನಂದಿಸಿರುವುದನ್ನು ಕಾಣಬಹುದು.

ನಟಿ ಅಮೂಲ್ಯ ಅವರು 'ಶ್ರಾವಣಿ ಸುಬ್ರಮಣ್ಯ', 'ಚೈತ್ರದ ಚಂದ್ರಮ', 'ಕೃಷ್ಣ ರುಕ್ಕು‘, ‘ಮುಗುಳುನಗೆ‘, 'ಮಾಸ್ತಿ ಗುಡಿ' ಹೀಗೆ ಅನೇಕ ಚಿತ್ರಗಳಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಸದ್ಯ, ಅವರು ‘ಪೀಕಬೂ’ದಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.