
ನಟಿ ಮಾಧವಿ ದಂಪತಿ
ಕನ್ನಡ ಸೇರಿದಂತೆ 80ನೇ ದಶಕದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಮಾಧವಿ. ಇದೀಗ ತಮ್ಮ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅಮೆರಿಕದಲ್ಲಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ 30ನೇ ವಿವಾಹ ವಾರ್ಷಿಕೋತ್ಸವದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಟಿ ಹಂಚಿಕೊಂಡ ವಿಡಿಯೊದಲ್ಲಿ ನಟಿ ಮಾಧವಿ ಹಾಗೂ ರಾಲ್ಫ್ ದಂಪತಿ ಕೈಗೆ ಮೆಹೆಂದಿ ಹಾಕಿ, ಮದುಮಗಳಂತೆ ರೆಡಿಯಾಗಿ ಪರಸ್ಪರ ಉಂಗುರ ಬದಲಾಯಿಸುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಜೊತೆಗೆ ಅವರ ಮೂವರು ಮುದ್ದಾದ ಹೆಣ್ಣು ಮಕ್ಕಳಾದ ಟಿಫಾನಿ, ಪ್ರಿಸ್ಸಿಲ್ಲಾ ಮತ್ತು ಎವೆಲಿನ್ ಭಾಗಿಯಾಗಿದ್ದರು.
ಮಾಧವಿ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ಮನಸು ಗೆದ್ದಿದ್ದಾರೆ. ಇವರು ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಷ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ರಾಲ್ಫ್ ಶರ್ಮಾ ಎಂಬುವವರನ್ನು ಮದುವೆ ಆಗುವ ಮೂಲಕ ಚಿತ್ರರಂಗಕ್ಕೆ ವಿದಾಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.