
ನಟಿ ಶರಣ್ಯಾ ಪೊನ್ವಣ್ಣನ್ ಪುತ್ರಿ ವಿವಾಹ ಸಂಭ್ರಮ
ಕೃಪೆ: ಇನ್‌ಸ್ಟಾಗ್ರಾಂ
ತಮಿಳು ಚಿತ್ರರಂಗದ ಪೋಷಕ ನಟಿ ಶರಣ್ಯಾ ಪೊನ್ವಣ್ಣನ್ ಅವರು ಪುತ್ರಿ ಡಾ. ಚಾಂದಿನಿ ಅವರ ವಿವಾಹ ಸಂಭ್ರಮದಲ್ಲಿ ಇದ್ದಾರೆ.
ಡಾ. ಚಾಂದಿನಿ ವಿವಾಹಕ್ಕೆ ಅನೇಕ ಸಿನಿ ತಾರೆಯರು ಆಗಮಿಸಿ ಶುಭಕೋರಿದ್ದಾರೆ.
ಡಾ. ಚಾಂದಿನಿ ಅವರು ಡಾ. ಡಾನ್ ಫಿಲಿಪ್ ಬಾಬು ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಂಪತಿಗೆ ಶುಭಕೋರಿದ ನಟ ಸೂರ್ಯ
ಚಾಂದಿನಿ ಅವರ ವಿವಾಹ ಸಂಭ್ರಮದಲ್ಲಿ ಭಾಗಿಯಾದ ನಟ ಧನುಷ್
ಶರಣ್ಯಾ ಪೊನ್ವಣ್ಣನ್ ಪುತ್ರಿಯ ಆರತಕ್ಷತೆಯಲ್ಲಿ ನಟ ಕಾರ್ತಿ ಅವರು ಭಾಗಿಯಾಗಿ ಶುಭಾಶಯ ತಿಳಿಸಿದ್ದಾರೆ.
ಫಿಲಿಪ್ ಬಾಬು, ಚಾಂದಿನಿ ಜೋಡಿಗೆ ಶುಭ ಕೋರಿದ ವಿಜಯ್ ಸೇತುಪತಿ
ಶರಣ್ಯಾ ಪೊನ್ವಣ್ಣನ್ ಅವರು ತಮಿಳು ಚಿತ್ರರಂಗ ಮಾತ್ರವಲ್ಲದೇ ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.