ಚಿತ್ರ ಕೃಪೆ: zeekannada
ಮತ್ತು anchor_anushreeofficial
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಬಹಳ ಖುಷಿಯಲ್ಲಿದ್ದಾರೆ. ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಅನುಶ್ರೀ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಅನುಶ್ರೀ ಮತ್ತೆ ನಿರೂಪಣೆಗೆ ಮರಳಿದ್ದಾರೆ.
ರೋಷನ್ ಹಾಗೂ ನಿರೂಪಕಿ ಅನುಶ್ರೀ
ಅನುಶ್ರೀ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಸೇರಿದಂತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ. ಸದ್ಯ ಮಹಾನಟಿ ಶೋನಲ್ಲಿ ನಿರೂಪಕಿಯಾಗಿದ್ದಾರೆ. ಈ ವಾರ ಮಹಾನಟಿ ಮತ್ತು ನಾವು ನಮ್ಮವರು ರಿಯಾಲಿಟಿ ಶೋಗಳ ಮಹಾಸಂಗಮ ನಡೆಯುತ್ತಿದೆ. ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ಅನುಶ್ರೀ ವೇದಿಕೆಗೆ ಆಗಮಿಸಿದ್ದಾರೆ. ಅನುಶ್ರೀ ವೇದಿಕೆಗೆ ಬರುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಅವರನ್ನು ಸ್ವಾಗತಿಸಿದ್ದಾರೆ.
ಚಿತ್ರ ಕೃಪೆ: zeekannada
ಇದೀಗ ಜೀ ಕನ್ನಡ ವಾಹಿನಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಅನುಶ್ರೀ ಅವರು ಭಾವುಕರಾಗಿ ಮಾತಾಡಿದ್ದಾರೆ. ʻತಾಳಿದವಳು ಬಾಳಿಯಾಳು ಅನ್ನೋ ಹಾಗೆ, ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ಬಿದ್ದಿದೆ. ನನಗೆ ಜೀವನವನ್ನ ಕೊಟ್ಟಿದ್ದು ಜೀ ಕನ್ನಡ. ಆ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್’ ಎಂದು ಅನುಶ್ರೀ ಹೇಳಿದ್ದಾರೆ.
ಮಹಾಸಂಗಮದಲ್ಲಿ ನಟ ಶರಣ್, ತರುಣ್ ಸುಧೀರ್, ನಟಿ ಪ್ರೇಮಾ, ನಿಶ್ವಿಕಾ ನಾಯ್ಡು, ಅಮೂಲ್ಯ, ಹಿರಿಯ ನಟಿ ತಾರಾ, ನಟ ರಮೇಶ್ ಅರವಿಂದ್ ಸೇರಿದಂತೆ ಕಲಾವಿದರು ಭಾಗಿಯಾಗಿದ್ದರು.
ರೋಷನ್ ಹಾಗೂ ನಿರೂಪಕಿ ಅನುಶ್ರೀ
ಯಾರು ಈ ರೋಷನ್?
ಅನುಶ್ರೀ ಅವರು ಕೊಡಗು ಮೂಲದ ರೋಷನ್ ಎಂಬುವವರ ಜೊತೆಗೆ ಮದುವೆ ಆಗಿದ್ದಾರೆ. ರೋಷನ್ ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ. ರೋಷನ್ ಐಟಿ ಉದ್ಯೋಗಿಯಾಗಿದ್ದು, ಯುವ ರಾಜ್ಕುಮಾರ್ ಮಾಜಿ ಪತ್ನಿ ಶ್ರೀದೇವಿ ಅವರ ಗೆಳೆಯರಾಗಿದ್ದಾರೆ. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಷನ್ ಮೊದಲಿಗೆ ಭೇಟಿಯಾಗಿದ್ದರು. ಮೊದಲು ಸ್ನೇಹ, ಆ ಸ್ನೇಹ ಪ್ರೀತಿಗೆ ತಿರುಗಿ ಈ ಇಬ್ಬರು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ಈ ಇಬ್ಬರ ಮದುವೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.