ADVERTISEMENT

PV Cine Sammana-3: ‘ಭೈರತಿ ರಣಗಲ್‌’ ಸೂತ್ರಧಾರನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:49 IST
Last Updated 3 ಜುಲೈ 2025, 23:49 IST
ನರ್ತನ್‌ 
ನರ್ತನ್‌    

ಅತ್ಯುತ್ತಮ ನಿರ್ದೇಶನ: ನರ್ತನ್‌, ಚಿತ್ರ: ಭೈರತಿ ರಣಗಲ್‌ 

2017ರಲ್ಲಿ ತೆರೆಕಂಡಿದ್ದ ‘ಮಫ್ತಿ’ ನಟ ಶಿವರಾಜ್‌ಕುಮಾರ್‌ ಅವರ ಸಿನಿಪಯಣಕ್ಕೊಂದು ತಿರುವು ನೀಡಿದ ಚಿತ್ರ. ಆ ಸಿನಿಮಾದಲ್ಲಿನ ಅವರ ‘ಭೈರತಿ ರಣಗಲ್‌’ ಪಾತ್ರದ ಗತ್ತು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿದೆ. ಇಂತಹ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾದ ನರ್ತನ್‌, ಅದೇ ಪಾತ್ರವನ್ನು ಹಿಗ್ಗಿಸಿ ಪ್ರೀಕ್ವೆಲ್‌ ರಚಿಸಿದರು. ‘ಭೈರತಿ ರಣಗಲ್‌’ ಅವರ ನಿರ್ದೇಶನದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು. ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ನರ್ತನ್‌ ಮುಡಿಗೇರಿತು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನರ್ತನ್‌, ‘ಪ್ರಜಾವಾಣಿ ಪತ್ರಿಕೆ ಯಾರಿಗೂ ಹೊಸತಲ್ಲ. ಆದರೆ ‘ಪ್ರಜಾವಾಣಿ’ ನೀಡುತ್ತಿರುವ ಪ್ರಶಸ್ತಿ ನನಗೆ ಹೊಸದು. ಇದಕ್ಕಾಗಿ ಪತ್ರಿಕೆಗೆ ಧನ್ಯವಾದ. ಕಿಶೋರ್‌ ಅವರಿಂದ ಪ್ರಶಸ್ತಿ ಪಡೆದಿರುವುದು ಸಂತೋಷ ತಂದಿದೆ. ನಮ್ಮ ನಿರ್ಮಾಪಕರಾದ ಗೀತಾ ಶಿವರಾಜ್‌ಕುಮಾರ್‌, ಶಿವಣ್ಣ, ಚಿತ್ರದ ತಾಂತ್ರಿಕ ವರ್ಗಕ್ಕೆ ಈ ವೇದಿಕೆ ಮೂಲಕ ಧನ್ಯವಾದ ಹೇಳುತ್ತೇನೆ’ ಎಂದರು.  

ನಾಮನಿರ್ದೇಶನಗೊಂಡವರು: ಜೈಶಂಕರ್‌ ಆರ್ಯರ್‌(ಶಿವಮ್ಮ ಯರೇಹಂಚಿನಾಳ), ಸಿದ್ದು ಪೂರ್ಣಚಂದ್ರ(ತಾರಿಣಿ), ಸಂತೋಷ್‌ ಆನಂದರಾಮ್‌(ಯುವ), ಎಂ.ಭರತ್‌ರಾಜ್‌(ಲಾಫಿಂಗ್‌ ಬುದ್ಧ), ಉತ್ಸವ್‌ ಗೋನವಾರ(ಫೋಟೋ), ಸಿಂಪಲ್‌ ಸುನಿ(ಒಂದು ಸರಳ ಪ್ರೇಮಕಥೆ), ಪೃಥ್ವಿ ಕೊಣನೂರು(ಹದಿನೇಳೆಂಟು), ನರ್ತನ್‌(ಭೈರತಿ ರಣಗಲ್‌).  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.