ADVERTISEMENT

ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

ಪಿಟಿಐ
Published 1 ಫೆಬ್ರುವರಿ 2026, 9:42 IST
Last Updated 1 ಫೆಬ್ರುವರಿ 2026, 9:42 IST
<div class="paragraphs"><p> ‘ದೇವದಾಸ್‘,  ‘ತೇರೆ ನಾಮ್’ ಹಾಗೂ&nbsp; &nbsp;‘ಯುವ’ ಸಿನಿಮಾದ ಪೋಸ್ಟ್‌</p></div>

‘ದೇವದಾಸ್‘, ‘ತೇರೆ ನಾಮ್’ ಹಾಗೂ   ‘ಯುವ’ ಸಿನಿಮಾದ ಪೋಸ್ಟ್‌

   

ಚಿತ್ರ ಕೃಪೆ: 
inoxmovies

ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ‘ಶಾರುಖ್ ಖಾನ್’ ನಟನೆಯ ‘ದೇವದಾಸ್‘, ‘ಸಲ್ಮಾನ್ ಖಾನ್’ ನಟನೆಯ ‘ತೇರೆ ನಾಮ್’ ಹಾಗೂ ‘ಅಭಿಷೇಕ್ ಬಚ್ಚನ್’ ಅಭಿನಯದ ‘ಯುವ’ ಸಿನಿಮಾಗಳನ್ನು ಫೆಬ್ರುವರಿಯಲ್ಲಿ ಮರು ಬಿಡುಗಡೆ ಮಾಡುವುದಾಗಿ ‘ಪಿವಿಆರ್ ಸಿನಿಮಾಸ್’ ತಿಳಿಸಿದೆ.

ADVERTISEMENT

ಪಿವಿಆರ್ ಸಿನಿಮಾಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೂರು ಸಿನಿಮಾಗಳನ್ನು ಮರು ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಿದೆ. ಫೆಬ್ರುವರಿ 6ರಂದು ‘ದೇವದಾಸ್’, 20ರಂದು ‘ತೇರೆ ನಾಮ್‘ ಹಾಗೂ 27ರಂದು ‘ಯುವ’ ಸಿನಿಮಾವನ್ನು ಪಿವಿಆರ್ ಐನಾಕ್ಸ್‌ನಲ್ಲಿ ಮರು ಬಿಡುಗಡೆ ಮಾಡುವುದಾಗಿ ತಿಳಿಸಿದೆ. 

‘ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ  ‘ಶಾರುಖ್ ಖಾನ್’ ನಟನೆಯ ‘ದೇವದಾಸ್’ ಸಿನಿಮಾ 2002ರಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ‘ಐಶ್ವರ್ಯಾ ರೈ ಬಚ್ಚನ್’ ಮತ್ತು ‘ಮಾಧುರಿ ದೀಕ್ಷಿತ್’ ಕೂಡ ನಟಿಸಿದ್ದರು. ಈ ಸಿನಿಮಾ ಪ್ರೀತಿ, ಜಾತಿ ಪದ್ದತಿಯ ಅಡೆತಡೆಗಳು ಮತ್ತು ಸ್ವಯಂ ವಿನಾಶದ ದುರಂತ ಕಥೆಯನ್ನು ಹೊಂದಿದೆ.

‘ಅಭಿಷೇಕ್ ಬಚ್ಚನ್‘ ಅಭಿನಯದ ‘ಯುವ’ ಸಿನಿಮಾವನ್ನು ‘ಮಣಿರತ್ನಂ’ ನಿರ್ದೇಶಿಸಿದ್ದಾರೆ. 2004ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ‘ಅಜಯ್ ದೇವಗನ್’ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆ ವಿಭಿನ್ನ ಹಿನ್ನೆಲೆಗಳಿಂದ ಬಂದ ಮೂವರು ಯುವಕರನ್ನು ಸುತ್ತುವರೆದಿದೆ.

‘ಸತೀಶ್‌ ಕೌಶಿಕ್‌’ ನಿರ್ದೇಶನದಲ್ಲಿ ಮೂಡಿಬಂದ ‘ತೇರೆ ನಾಮ್’ ಸಿನಿಮಾದಲ್ಲಿ ನಾಯಕ ನಟನಾಗಿ ‘ಸಲ್ಮಾನ್ ಖಾನ್’ ಅಭಿನಯಿಸಿದ್ದಾರೆ. ಜೊತೆಗೆ‌ ‘ಭೂಮಿಕಾ ಚಾವ್ಲಾ’ ಕೂಡ ನಟಿಸಿದ್ದು, 2003ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದ ಚಿತ್ರಕಥೆ ಒಬ್ಬ ೌಡಿ ಹುಡುಗನ ಸುತ್ತ ಸುತ್ತುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.