‘ಬಾರ್ಡರ್ 2’ ಚಿತ್ರದ ಟೀಸರ್ ಬಿಡುಗಡೆ ವೇಳೆ ನಟ ಸನ್ನಿ ಡಿಯೋಲ್ ಅವರು ವೇದಿಕೆ ಮೇಲೆ ತಂದೆ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಹಿಂದಿ ಚಿತ್ರರಂಗದ ಜನಪ್ರಿಯ ನಟ ಧರ್ಮೇಂದ್ರ ಅವರು ನ.24ರಂದು ನಿಧನರಾದರು. ಪತಿ ನಿಧನದ ಬಳಿಕ, ಪತ್ನಿ ಹೇಮಾ ಮಾಲಿನಿ ಕೆಲವು ದಿನಗಳ ಹಿಂದೆ ಭಾವುಕ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸನ್ನಿ ಡಿಯೋಲ್ ನಟನೆಯ ‘ಬಾರ್ಡರ್ 2’ ಚಿತ್ರದ ಟೀಸರ್ ಇಂದು (ಮಂಗಳವಾರ) ಬಿಡುಗಡೆಯಾಗಿದೆ. ಈ ಟೀಸರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ 10ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ದೇಶಕ್ಕಾಗಿ ಸೈನಿಕರ ಹೋರಾಟ, ನೌಕಪಡೆ, ವಾಯುಪಡೆಗಳ ಸೇನಾ ಕಾರ್ಯಚರಣೆ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದು.
1997ರಲ್ಲಿ ತೆರೆಕಂಡ 'ಬಾರ್ಡರ್' ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದರು. ಇದರ ಮುಂದುವರಿದ ಭಾಗ 'ಬಾರ್ಡರ್ 2' ಟಿ-ಸೀರೀಸ್ ಮತ್ತು ಜೆಪಿ ಫಿಲ್ಸ್ ನಿರ್ಮಿಸಿರುವ ಸಿನಿಮಾವನ್ನು ಜೆ. ಪಿ. ದತ್ತಾ ಅವರು ನಿರ್ದೇಶಿಸಿದ್ದಾರೆ.
'ಬಾರ್ಡರ್ 2' ಚಿತ್ರದಲ್ಲಿ ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಅಕ್ಷಯ್ ಖನ್ನಾ, ವರುಣ್ ಧವನ್, ದಿಶ್ಚಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ ಅವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.