ADVERTISEMENT

ಕ್ರಿಸ್‌ಮಸ್‌ ಸಡಗರ: ಅಲಿಯಾ ಭಟ್‌ ಜೊತೆ ಕರೀನಾ ಕಪೂರ್ ಪಾರ್ಟಿ 

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 9:17 IST
Last Updated 25 ಡಿಸೆಂಬರ್ 2019, 9:17 IST
ಕರೀನಾ ಕಪೂರ್ ಇನ್‌ಸ್ಟಾಗ್ರಾಮ್‌ ಚಿತ್ರ
ಕರೀನಾ ಕಪೂರ್ ಇನ್‌ಸ್ಟಾಗ್ರಾಮ್‌ ಚಿತ್ರ   

ಮುಂಬೈ: ಬಾಲಿವುಡ್ ಅಂಗಳದಲ್ಲಿ ಕ್ರಿಸ್‌ಮಸ್‌ ಸಡಗರ ಭಾರಿ ಜೋರಾಗಿದೆ.

ಕ್ರಿಸ್‌ಮಸ್‌ಪ್ರಯುಕ್ತ ಮಂಗಳವಾರ ತಡರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್, ಪತ್ನಿ ನಟಿ ಕರೀನಾ ಕಪೂರ್ ಖಾನ್ ತಮ್ಮ ನಿವಾಸದಲ್ಲಿ ವಿಶೇಷಔತಣ ಕೂಟ ಏರ್ಪಡಿಸಿದ್ದರು.

ಔತಣ ಕೂಟದಲ್ಲಿ ನಟಿಯರಾದ ಅಲಿಯಾ ಭಟ್‌, ಮಲೈಕಾ ಅರೋರಾ,ಯಾಮಿ ಗೌತಮಿ, ಭೂಮಿ ಪಡ್ನೇಕರ್, ರಣವೀರ್‌ ಕಪೂರ್‌, ಅರ್ಜುನ್‌ ಕಪೂರ್‌, ವರುಣ್‌ ಧವನ್‌, ನಿರ್ದೇಶಕ ಕರಣ್‌ ಜೋಹರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಇದೇ ವೇಳೆ ತೆಗೆದಫೋಟೊಗಳನ್ನು ಕರೀನಾ ತಮ್ಮಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ‘ಗುಡ್ ನ್ಯೂಸ್’ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.

ADVERTISEMENT

ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.