ADVERTISEMENT

’ಡೆವಿಲ್’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಟ ವಿನೋದ್ ರಾಜ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:26 IST
Last Updated 26 ಆಗಸ್ಟ್ 2025, 7:26 IST
   

ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಇದ್ರೆ ನೆಮ್ಮದಿಯಾಗಿ ಇರಬೇಕು‘ ಹಾಡಿಗೆ ನಟ ವಿನೋದ್ ರಾಜ್ ಮೈ ಚಳಿ ಬಿಟ್ಟು ಕುಣಿದಿದ್ದಾರೆ.

ಒಂದು ಕಾಲದಲ್ಲಿ ಡ್ಯಾನ್ಸ್, ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ಇವರು ಮತ್ತೆ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ವಿನೋದ್ ರಾಜ್ ಅವರ ಡ್ಯಾನ್ಸ್ ಗೆ ಇಂದಿಗೂ ಅಭಿಮಾನಿಗಳು ಇದ್ದಾರೆ. ಚಿತ್ರರಂಗದಿಂದ ದೂರ ಉಳಿದಿದ್ದರೂ ಸಾಮಾಜಿಕ ಕಾರ್ಯದ ಮೂಲಕ ಆಗಾಗ ಗುರುತಿಸಿಕೊಳ್ಳುತ್ತಿರುತ್ತಾರೆ.

ADVERTISEMENT

ಡೆವಿಲ್ ಸಿನಿಮಾದ ‘ಇದ್ರೆ ನೆಮ್ಮದಿಯಾಗಿ ಇರಬೇಕು‘ ಹಾಡು ಭಾರಿ ಸದ್ದು ಮಾಡುತ್ತಿದ್ದು, ದರ್ಶನ್ ನಟನೆಗೆ ಅಭಿಮಾನಿಗಳು ಮೆಚ್ಚುಗೆ ಗಳಿಸಿದ್ದಾರೆ. ನಟ ವಿನೋದ್ ರಾಜ್ ನೃತ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.