ADVERTISEMENT

ಬಾಲಿವುಡ್‌ ನಟ ಆದಿತ್ಯ ಕಪೂರ್ ಮನೆಗೆ ಅಕ್ರಮ ಪ್ರವೇಶ: ದುಬೈ ಮೂಲದ ಮಹಿಳೆ ಬಂಧನ

ಪಿಟಿಐ
Published 27 ಮೇ 2025, 12:50 IST
Last Updated 27 ಮೇ 2025, 12:50 IST
<div class="paragraphs"><p>ಆದಿತ್ಯ ರಾಯ್ ಕಪೂರ್</p></div>

ಆದಿತ್ಯ ರಾಯ್ ಕಪೂರ್

   

–ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದ ಪಶ್ಚಿಮ ಉಪನಗರ ಖಾರ್‌ನಲ್ಲಿರುವ ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್ ಅವರ ಅಪಾರ್ಟ್‌ಮೆಂಟ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ 48 ವರ್ಷದ ದುಬೈ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿ ಮಹಿಳೆಯನ್ನು ಗಜಾಲಾ ಸಿದ್ಧಿಕಿ ಎಂದು ಗುರುತಿಸಲಾಗಿದೆ. ಈಕೆ ಸೋಮವಾರ ಮುಂಬೈಗೆ ಆಗಮಿಸಿದ್ದರು. ಭದ್ರತಾ ಸಿಬ್ಬಂದಿಗೆ ಕೆಲವು ನೆಪಗಳನ್ನು ಹೇಳಿ ಶಿರ್ಲಿ ರಾಜನ್ ರಸ್ತೆಯಲ್ಲಿರುವ ಆದಿತ್ಯ ರಾಯ್ ಕಪೂರ್ ಅವರ ಅಪಾರ್ಟ್‌ಮೆಂಟ್‌ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ನೀಡಿದ ದೂರು ಆಧರಿಸಿ ಸಿದ್ಧಿಕಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಾನು (ಸಿದ್ಧಿಕಿ) ಆದಿತ್ಯ ರಾಯ್ ಕಪೂರ್ ಅವರನ್ನು ಭೇಟಿಯಾಗಲು ಬಯಸಿದ್ದೇನೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಅನುಮತಿ ಪಡೆಯದೆ ಅಪಾರ್ಟ್‌ಮೆಂಟ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದಕ್ಕಾಗಿ ಸಿದ್ಧಿಕಿ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.

ಜನವರಿ 16ರಂದು ಬಾಂದ್ರಾ ಪ್ರದೇಶದಲ್ಲಿರುವ ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ ಅವರ ನಿವಾಸದ ಒಳನುಸುಳಿದ್ದ ಶರೀಫುಲ್ ಇಸ್ಲಾಂ, ಖಾನ್ ಅವರಿಗೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಜನವರಿ 19ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.