ಮಲಯಾಳ ನಟ ದುಲ್ಕರ್ ಸಲ್ಮಾನ್ ತೆಲುಗಿನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ಟಾಲಿವುಡ್‌ನಲ್ಲಿ ಅವರ ಹೊಸ ಚಿತ್ರವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ಇನ್ನೂ ಹೆಸರಿಡದ ದುಲ್ಕರ್ ಅವರ 41ನೇ ಸಿನಿಮಾಕ್ಕೆ ತೆಲುಗಿನ ಮತ್ತೋರ್ವ ಸ್ಟಾರ್ ನಾನಿ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.
ಈ ಹಿಂದೆ ಮಹೇಶ್ ಬಾಬು ಅವರ ‘ಸರ್ಕಾರು ವಾರಿ ಪಾಟ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ರವಿಬಾಬು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಎಸ್‌ಎಲ್‌ವಿ ಸಿನಿಮಾಸ್ ಬಂಡವಾಳ ಹೂಡುತ್ತಿದೆ.
ಮಲಯಾಳದಲ್ಲಿ ಕೆಲ ಚಿತ್ರಗಳ ಸೋಲಿನ ಬಳಿಕ ದುಲ್ಕರ್ ತೆಲುಗಿನಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅವರ ಹಿಂದಿನ ಸಿನಿಮಾ ‘ಲಕ್ಕಿ ಭಾಸ್ಕರ’ ಸೂಪರ್ ಹಿಟ್ ಎನಿಸಿಕೊಂಡಿತ್ತು. ‘ಸೀತಾ ರಾಮಂ’ ಕೂಡ ಯಶಸ್ಸು ಕಂಡಿತ್ತು. ವಿಭಿನ್ನ ಕಥೆಗಳನ್ನು ಆಯ್ದುಕೊಳ್ಳುವ ಇವರ ಹಿಂದಿನ ಮಲಯಾಳ ಚಿತ್ರ ‘ಕಿಂಗ್ ಆಫ್ ಕೋತಾ’ ಬಾಕ್ಸಾಫೀಸ್‌ನಲ್ಲಿ ಅಷ್ಟೇನು ಯಶಸ್ಸು ಕಂಡಿರಲಿಲ್ಲ. ಸದ್ಯ ‘ಐ ಆ್ಯಮ್ ಗೇಮ್’ ಎಂಬ ಮಲಯಾಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ತೆಲುಗಿನ ಹೊಸ ಚಿತ್ರ ಸೆಟ್ಟೇರಲಿದೆ. ಜಿ.ವಿ.ಪ್ರಕಾಶ್ ಸಂಗೀತ, ಅನಯ್ ಗೋಸ್ವಾಮಿ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.