ADVERTISEMENT

ಶಿವ ಶಂಭೋ ಸ್ವಯಂಭೋ ಹಾಡಿನ ಪ್ರೊಮೋ ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2026, 10:59 IST
Last Updated 12 ಫೆಬ್ರುವರಿ 2026, 10:59 IST
   

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ‘ಶಿವ ಶಂಭೋ ಸ್ವಯಂಭೋ’ ಹಾಡಿನ ಪ್ರೊಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. ‘ಭಕ್ತಿಯ ಅಲೆ ಆರಂಭವಾಗಿದೆ’ ಎಂಬ ಅಡಿಬರಹ ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಬಿಡುಗಡೆಗೊಂಡ ಹಾಡಿನ ಪ್ರೊಮೋದಲ್ಲಿ, ‘ಎಐ ತಂತ್ರಜ್ಞಾನದ ಮೂಲಕ ಬ್ರಹ್ಮಾಂಡ, ಕೈಲಾಸದ ಕಲ್ಪನೆ ಹಾಗೂ ಶಿವನ ಸ್ವರೂಪವನ್ನು' ನೋಡಬಹುದು. 20ಸೆಕೆಂಡಿನ ವಿಡಿಯೊ ಪ್ರೇಕ್ಷಕರನ್ನು ಸೆಳೆದಿದೆ. ಫೆ. 15ರ ಶಿವರಾತ್ರಿಯಂದು ಬೆಳಗ್ಗೆ 10ಗಂಟೆಗೆ ಪೂರ್ತಿ ಹಾಡು ಅನಾವರಣಗೊಳ್ಳಲಿದೆ.

ಈ ಹಾಡಿಗೆ  ಸ್ವಾಮಿ ದಯಾನಂದ ಸರಸ್ವತಿ ಅವರು ಸಾಹಿತ್ಯ ಬರೆದು, ಸಂಯೋಜನೆ ಮಾಡಿದ್ದಾರೆ, ನಾರಾಯಣ್ ಶರ್ಮ ಅವರು ಧ್ವನಿ ನೀಡಿದ್ದಾರೆ.

ಹೊಂಬಾಳೆ ಸಂಸ್ಥೆಯು ‘ಕಾಂತಾರ’, ‘ಬಘೀರ’, ‘ಯುವರತ್ನ’ ಸೇರಿ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದೆ.  ಇದೀಗ, ಭಕ್ತಿ ಕುರಿತಾದ ‘ಶಿವ ಶಂಭೋ ಸ್ವಯಂಭೋ’ ಹಾಡಿನ ಪ್ರೊಮೋ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.