
ಚಿತ್ರ ಕೃಪೆ: Maddock Films
ನವದೆಹಲಿ: ಶ್ರೀರಾಮ್ ರಾಘವನ್ ನಿರ್ದೇಶನದ, ಅಗಸ್ತ್ಯ ನಂದಾ ನಟನೆಯ 'ಇಕ್ಕಿಸ್' ಸಿನಿಮಾವು, ಡಿ.25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ನಿರ್ಮಾಪಕ ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಅರಿಜಿತ್ ಬಿಸ್ವಾಸ್ ಮತ್ತು ಪೂಜಾ ಲಧಾ ಸೂರ್ತಿ ಅವರು ಚಿತ್ರಕಥೆ ಬರೆದಿದ್ದಾರೆ.
ಚಿತ್ರ ಬಿಡುಗಡೆಯ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ದಿನೇಶ್ ವಿಜನ್, ‘ಪರಮವೀರ ಚಕ್ರ ಬಿರುದು ಪಡೆದ ಕಿರಿಯ ಅಧಿಕಾರಿ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಾಧಾರಿತ ಕಥೆ ಇದಾಗಿದೆ’ ಎಂದು ಬರೆದುಕೊಂಡಿದ್ದಾರೆ.
1971ರ ಇಂಡೋ-ಪಾಕ್ ಯುದ್ಧದ ‘ಬಸಂತರ್’ ಕದನದಲ್ಲಿ 21ನೇ ವಯಸ್ಸಿನಲ್ಲಿ ಅರುಣ್ ಅವರು ಯುದ್ಧದಲ್ಲಿ ಮುನ್ನುಗಿ ಧೈರ್ಯ ತೋರಿ ಹೇಗೆ ಹುತಾತ್ಮರಾದರು ಎಂಬುವುದು 'ಇಕ್ಕಿಸ್' ಚಿತ್ರದ ಕಥಾಹಂದರ’ ಎಂದಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಧರ್ಮೇಂದ್ರ, ಜೈದೀಪ್ ಅಹ್ಲಾವತ್, ಸಿಕಂದರ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.