ADVERTISEMENT

ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 10:43 IST
Last Updated 6 ಡಿಸೆಂಬರ್ 2025, 10:43 IST
<div class="paragraphs"><p>IMBD ಬಿಡುಗಡೆ ಮಾಡಿರುವ&nbsp; 2025-2026ನೇ ಸಾಲಿನ ಭಾರತದ&nbsp; ಅಗ್ರ 10 ಸುಂದರ ನಟಿಯರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡೋಣ.&nbsp;</p></div>

IMBD ಬಿಡುಗಡೆ ಮಾಡಿರುವ  2025-2026ನೇ ಸಾಲಿನ ಭಾರತದ  ಅಗ್ರ 10 ಸುಂದರ ನಟಿಯರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡೋಣ. 

   
<div class="paragraphs"><p>@kritisanon</p></div>

‘ತೇರೆ ಇಷ್ಕ್ ಮೇ’ ಚಿತ್ರದ ಯಶಸ್ಸಿನ ಬಳಿಕ ನಟಿ ಕೃತಿ ಸನೋನ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರ ಎತ್ತರ ಮತ್ತು ಕ್ಯೂಟ್‌ ಲುಕ್ ಸಿನಿ ಅಭಿಮಾನಿಗಳಿಂದ ಹಿಡಿದು, ಛಾಯಾಚಿತ್ರಗ್ರಾರರ ನೆಚ್ಚಿನ ನಟಿಯಾಗಿದ್ದಾರೆ.

ಪ್ರಿಯಾಂಕಾ ಅರುಲ್ಮೋಹನ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ತಮ್ಮ ಅಭಿನಯದಿಂದ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ತಮ್ಮ ನಿಂಪಲ್ ಲುಕ್‌ನಿಂದ ಹೆಚ್ಚು ಪ‍್ರಸಿದ್ದರಾಗಿದ್ದಾರೆ.

ADVERTISEMENT

3ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ. ಒಂದೇ ಛಾವಾ, ಕುಬೇರಾ ಮತ್ತು ಗರ್ಲ್‌ಫ್ರೆಂಡ್‌ಗಳಂತಹ ಹಿಟ್ ಸಿನಿಮಾಗಳನ್ನು ನೀಡಿದ ಅವರು ಮೂರನೇ ಸ್ಥಾನದಲ್ಲಿದ್ದಾರೆ. 

ಸಾಯಿ ಪಲ್ಲವಿ: ಈ ಸ್ಥಾನದಲ್ಲಿ ದಕ್ಷಿಣ ಭಾರತದ ತಾರಾ ನಟಿ ಸಾಯಿಪಲ್ಲವಿ 4ನೇ ಸ್ಥಾನ ಪಡೆದಿದ್ದಾರೆ. ತನ್ನ ನೈಸರ್ಗಿಕ ಸೌಂದರ್ಯದಿಂದ ಸಿನಿ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮನ್ನಾ ಭಾಟಿಯಾ: ಸದಾ ಒಂದಲ್ಲೊಂದು ಚಿತ್ರದಲ್ಲಿ ಸಕ್ರಿಯವಾಗಿರುವ ನಟಿ ತಮನ್ನಾ ಭಾಟಿಯಾ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಶ್ರೀಲೀಲಾ: 6ನೇ ಸ್ಥಾನವನ್ನು ಶ್ರೀಲೀಲಾ ಪಡೆದುಕೊಂಡಿದ್ದಾರೆ. ತಮ್ಮ ಕ್ಯೂಟ್‌ ಲುಕ್‌, ಆಕರ್ಷಕ ಫೋಟೋಶೂಟ್‌ಗಳು ಮತ್ತು ದೊಡ್ಡ ಬಜೆಟ್ ಚಲನಚಿತ್ರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಮನ್ನಣೆ ಗಳಿಸಿದ್ದಾರೆ.

ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಪಡೆದ ನಯನತಾರಾ 7ನೇ ಸ್ಥಾನದಲ್ಲಿದ್ದಾರೆ. ಉತ್ತಮ ಸಿನಿಮಾ ಹಾಗೂ ಅವರ ಸೌಂದರ್ಯದಿಂದ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ.

8ನೇ ಸ್ಥಾನ ಸಮಂತಾ ರುತ್ ಪ್ರಭು ಅವರಿದ್ದು, ಪಡ್ಡೆ ಹುಡುಗರನ್ನು ನಾಚಿಸುವ ಅವರ ಸೌಂದರ್ಯದಿಂದ ಮನ್ನಣೆ ಪಡೆದಿದ್ದಾರೆ.‌

ಈ ಪಟ್ಟಯಲ್ಲಿ 9ನೇ ಸ್ಥಾನದಲ್ಲಿ ಕೀರ್ತಿ ಸುರೇಶ್  ಇದ್ದಾರೆ. 

ಕಾಜಲ್ ಅಗರವಾಲ್: ನಟಿ ಕಾಜಲ್ ಅಗರವಾಲ್ 10ನೇ ಸ್ಥಾನ ಪಡೆದಿದ್ದು, ಕಣ್ಣು, ಕಾಂತಿಯುತ ನಗುವಿನಂದಲೇ ನಟಿ ಜನಮನ್ನಣೆ ಪಡೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.