ಜಾನ್ವಿ ಕಪೂರ್ ನಟನೆಯ 'ಹೋಮ್‌ಬೌಂಡ್' ಚಿತ್ರವು 2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆಯಲು 'ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಸಿನಿಮಾ' ವಿಭಾಗದಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಈ ಕುರಿತು ಮಾತಾನಾಡಿರುವ ನಿರ್ಮಾಪಕ ಕರಣ್ ಜೋಹರ್, ‘ 'ಹೋಮ್‌ಬೌಂಡ್' ಚಿತ್ರವು ಕಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಇದೀಗ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ‘ಆಕಾಶದಲ್ಲೇ ಹಾರಿದಷ್ಟು ಸಂತಸವಾಗುತ್ತಿದೆ. ಈ ಚಿತ್ರವು 'ಅರ್ಜೆಂಟೀನಾದ ‘ಬೆಲೆನ್ ’, ಬ್ರೆಜಿಲ್‌ನ ‘ದಿ ಸೀಕ್ರೆಟ್ ಏಜೆಂಟ್’, ಫ್ರೆಂಚ್ ನಾಟಕ ‘ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್’, ಜರ್ಮನಿಯ ‘ಸೌಂಡ್ ಆಫ್ ಫಾಲಿಂಗ್’, ಮತ್ತು ಇರಾಕ್‌ನ ‘ದಿ ಪ್ರೆಸಿಡೆಂಟ್ಸ್ ಕೇಕ್’ ಚಿತ್ರಗಳ ಜತೆ ಸ್ಪರ್ಧಿಸಲಿದೆ ಎಂದು ಹೇಳಿಕೊಂಡಿದ್ದಾರೆ.
98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಮಾರ್ಚ್ 15ರಂದು ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ಕರಣ್ ಜೋಹರ್ ನಿರ್ಮಾಣದ 'ಹೋಮ್‌ಬೌಂಡ್' ಸಿನಿಮಾವನ್ನು ನೀರಜ್ ಘಯಾನ್ ನಿರ್ದೆಶನ ಮಾಡಿದ್ದಾರೆ. ಇಶಾನ್ ಖಟ್ಟರ್, ವಿಶಾಲ್ ಜೇತ್ವಾ, ಜಾಹ್ನವಿ ಕಪೂರ್ ಸೇರಿಂದತೆ ಅನೇಕರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.