ADVERTISEMENT

ಆರ್‌ಆರ್‌ಆರ್‌: ನಾಳೆ ಬಿಡುಗಡೆ ಚಿತ್ರವಲ್ಲ ಮತ್ತೇನು?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 10:23 IST
Last Updated 8 ಡಿಸೆಂಬರ್ 2021, 10:23 IST
ಆರ್‌ಆರ್‌ಆರ್‌ ಚಿತ್ರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಮೆಗಾ ಪವರ್‌ಸ್ಟಾರ್‌ ರಾಮ್‌ಚರಣ್‌
ಆರ್‌ಆರ್‌ಆರ್‌ ಚಿತ್ರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಮೆಗಾ ಪವರ್‌ಸ್ಟಾರ್‌ ರಾಮ್‌ಚರಣ್‌    

ಆರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ಕಥಾಹಂದರದ ಚಿತ್ರ ತೆರೆ ಕಾಣಲು ಮುಂದಿನ ಜನವರಿ 7 ಮುಹೂರ್ತ ಸಿದ್ಧವಾಗಿದೆ. ಹಾಗಿದ್ದರೆ ಡಿಸೆಂಬರ್‌ 9ರಂದು ಬಿಡುಗಡೆಗೊಳ್ಳುವುದೇನು?

ಡಿ. 9ರಂದು ಬೆಳಗ್ಗೆ 10ಕ್ಕೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್‌ ನ ಟ್ರೇಲರ್‌ ಬಿಡುಗಡೆ ಆಗಲಿದೆ. ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗುವುದಕ್ಕೂ ಮುನ್ನ ಈ ಟ್ರೇಲರ್‌ನ್ನು ದೊಡ್ಡ ಪರದೆಯ ಮೇಲೆ ನೋಡಬಹುದು ಎಂದಿದೆ ಚಿತ್ರತಂಡ.

ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಮೆಗಾ ಪವರ್‌ಸ್ಟಾರ್‌ ರಾಮ್‌ಚರಣ್‌ ಅಭಿನಯದ ಚಿತ್ರವಿದು. ಅಂದಹಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿರುವುದು ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್‌. ಕೆವಿಎನ್‌ ಪ್ರೊಡಕ್ಷನ್‌ ಹೌಸ್‌ ರಾಜ್ಯದಲ್ಲಿ ಚಿತ್ರದ ವಿತರಣೆಯ ಹಕ್ಕು ಪಡೆದಿದೆ. ಜನವರಿ 7ರಂದು ಈ ಚಿತ್ರ ಬಿಡುಗಡೆ ಆಗಲಿದೆ. ವಿವರ ಇಲ್ಲಿದೆ.

ADVERTISEMENT

ಎಲ್ಲೆಲ್ಲಾ ಬಿಡುಗಡೆ?

ಬೆಂಗಳೂರು: ಲಾಲ್‌ಬಾಗ್‌ – ಊರ್ವಶಿ, ಮಾಗಡಿರಸ್ತೆ– ಅಂಜನ್‌, ಆಗರ– ತಿರುಮಲ, ಕೆ.ಆರ್‌.ಪುರಂ– ವೆಂಕಟೇಶ್ವರ, ಬಿ.ಎನ್‌.ಪುರ– ಪುಷ್ಪಾಂಜಲಿ, ಜೆ.ಪಿ.ನಗರ– ಸಿದ್ದೇಶ್ವರ,ರೇಣುಕಾ ಪ್ರಸನ್ನ, ಎಂ.ಜಿ.ರಸ್ತೆ – ಸ್ವಾಗತ್‌ ಶಂಕರ್‌ನಾಗ್‌, ಸ್ಯಾಂಕಿ ರಸ್ತೆ– ಕಾವೇರಿ, ಸೇವಾನಗರ– ಮುಕುಂದ, ಕೋಣನಕುಂಟೆ – ಮಾನಸಾ, ಹೊಂಗಸಂದ್ರ– ಬೃಂದಾ, ಆರ್‌.ಟಿ.ನಗರ – ರಾಧಾಕೃಷ್ಣ, ಸಂಜಯನಗರ– ವೈಭವ್‌, ಮಾರತ್‌ಹಳ್ಳಿ– ವಿನಾಯಕ.

ಕೋಲಾರ: ನಾರಾಯಣಿ. ಚಿಕ್ಕಬಳ್ಳಾಪುರ: ಬಾಲಾಜಿ, ಪಾವಗಡ: ಮಾರುತಿ, ಮುಳುಬಾಗಿಲು: ವರದರಾಜ್‌, ದೊಡ್ಡಬಳ್ಳಾಪುರ: ವೈಭವ್‌, ವಿಜಯಪುರ: ಗೌರಿಶಂಕರ, ಮೈಸೂರು: ಡಿಆರ್‌ಸಿ, ದಾವಣಗೆರೆ: ವಸಂತ, ಬಳ್ಳಾರಿ: ರಾಧಿಕಾ, ರಾಘವೇಂದ್ರ, ನಟರಾಜ ಕಾಂಪ್ಲೆಕ್ಸ್‌, ಹೊಸಪೇಟೆ: ಬಾಲ, ಸಿರಗುಪ್ಪ: ಬಾಲಾಜಿ, ಕಂಪ್ಲಿ: ಭಾರತ್‌, ಚಂದ್ರಕಲಾ, ಕುರುಗೋಡು: ಎಸ್‌ಎಲ್‌ವಿ, ತೋರಣಗಲ್‌: ವಿಜಯಲಕ್ಷ್ಮೀ, ಸಂಡೂರು: ವಿಶಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.