ADVERTISEMENT

70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 7:36 IST
Last Updated 25 ಫೆಬ್ರುವರಿ 2026, 7:36 IST
<div class="paragraphs"><p>ಫಿಲಂ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಚಂದನವನದ  ತಾರೆಯರು</p></div>

ಫಿಲಂ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಚಂದನವನದ ತಾರೆಯರು

   

ಕೃಪೆ: ಇನ್ಸ್ಟಾಗ್ರಾಮ್

ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ADVERTISEMENT

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಚಿತ್ರ ನಿರ್ದೇಶಕ ವಿಭಾಗದಲ್ಲಿ ‘ಹದಿನೇಳೆಂಟು‘ ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ನಟ  ವಿಭಾಗದಲ್ಲಿ  ‘ಬಘೀರ’ ಚಿತ್ರಕ್ಕಾಗಿ ಶ್ರೀಮುರಳಿ ಅವರಿಗೆ ಪ್ರಶಸ್ತಿ ದೊರಕಿದೆ.

ಅಕ್ಷತಾ ಪಾಂಡವಪುರ ಅವರು ‘ಕೋಳಿ ಎಸ್ರು’ ಚಿತ್ರಕ್ಕಾಗಿ ಅತ್ಯುತ್ತಮ ನಟಿ  ವಿಭಾಗದಲ್ಲಿ ಫಿಲಂ ಫೇರ್ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 'ಬ್ಲಿಂಕ್' ಚಿತ್ರಕ್ಕೆ ವಿಮರ್ಶಕರ ಪ್ರಶಸ್ತಿ ಲಭಿಸಿದೆ. 

ಅತ್ಯುತ್ತಮ ನಟ ವಿಭಾಗದಲ್ಲಿ ‘ಕೆರೆಬೇಟೆ’ ಚಿತ್ರಕ್ಕಾಗಿ ಗೌರಿಶಂಕರ್ ಅವರಿಗೆ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿ ದೊರಕಿದೆ. 

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಅಂಕಿತಾ ಅಮರ್ ಅವರ ಅನಾಮಿಕಾ ಪಾತ್ರಕ್ಕೆ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ.

ಪೋಷಕ ನಟ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ ‘ಬ್ಲಿಂಕ್‘ ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಪ್ರಶಸ್ತಿ ಲಭಿಸಿದೆ.

ಪೋಷಕ ನಟಿ ಮತ್ತು ಹೊಸ ಪ್ರತಿಭೆ ವಿಭಾಗದಲ್ಲಿ ‘ಭೀಮ’ ಚಿತ್ರಕ್ಕಾಗಿ ಪ್ರಿಯಾ ಶಠಮರ್ಷಣ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ಗೌರಿ’ ಚಿತ್ರಕ್ಕಾಗಿ ಸಮರ್ಜಿತ್ ಲಂಕೇಶ್  ಅವರಿಗೆ ಅತ್ಯುತ್ತಮ ಹೊಸ ನಟ ವಿಭಾಗದಲ್ಲಿ  ಫಿಲಂ ಫೇರ್ ದೊರಕಿದೆ.

‘ಕೆರೆಬೇಟೆ’ ಚಿತ್ರಕ್ಕಾಗಿ ಬಿಂದು ಶಿವರಾಂ ಅವರಿಗೆ  ಅತ್ಯುತ್ತಮ ಹೊಸ ನಟಿ ವಿಭಾಗದಲ್ಲಿ  ಪ್ರಶಸ್ತಿ ಲಭಿಸಿದೆ. 

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಹಾಡಿಗಾಗಿ  ಅರ್ಜುನ್ ಜನ್ಯಾ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. 

ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡಿಗಾಗಿ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಅತ್ಯುತ್ತಮ ಸಾಹಿತ್ಯ ವಿಭಾಗದಲ್ಲಿ ಫಿಲಂ ಫೇರ್ ಲಭಿಸಿದೆ. 

ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ ‘ದ್ವಾಪರ’ ಹಾಡಿಗಾಗಿ ಜಸ್ಕರನ್ ಸಿಂಗ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ‘ಕರಟಕ ದಮನಕ’ ಚಿತ್ರದ ಹಾಡಿಗಾಗಿ ಶ್ರುತಿ ಪ್ರಹ್ಲಾದ್ ಅವರು ಫಿಲಂ ಫೇರ್  ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.