ADVERTISEMENT

ಕಾಂತಾರ ಚಾಪ್ಟರ್–1 ವೀಕ್ಷಿಸಿದ ಅಲ್ಲು ಅರ್ಜುನ್: ಸಿನಿಮಾ ಕುರಿತು ಹೇಳಿದ್ದಿಷ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 12:58 IST
Last Updated 24 ಅಕ್ಟೋಬರ್ 2025, 12:58 IST
<div class="paragraphs"><p>ಕಾಂತಾರ ಚಾಪ್ಟರ್–1 ಪೋಸ್ಟರ್</p></div>

ಕಾಂತಾರ ಚಾಪ್ಟರ್–1 ಪೋಸ್ಟರ್

   

ಚಿತ್ರ: @alluarjun

ADVERTISEMENT

‘ವ್ಹಾ.. ಅದ್ಭುತ ಸಿನಿಮಾ. ಅದನ್ನು ನೋಡುವಾಗ ಭ್ರಮಾಲೋಕದಲ್ಲಿ ಇರುವಂತೆ ಭಾಸವಾಯಿತು’– ‘ಕಾಂತಾರಾ ಅಧ್ಯಾಯ–1’ ಚಿತ್ರ ವೀಕ್ಷಿಸಿದ ಬಳಿಕ ನಟ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ ಪರಿ ಇದು.

ಸಿನಿಮಾ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ನಿನ್ನೆ ರಾತ್ರಿ ಕಾಂತಾರ ವೀಕ್ಷಿಸಿದೆ. ಬರಹಗಾರನಾಗಿ, ನಿರ್ದೇಶಕನಾಗಿ ಮತ್ತು ನಟನಾಗಿ ಏಕವ್ಯಕ್ತಿ ಪ್ರದರ್ಶನ ತೋರಿದ್ದಕ್ಕಾಗಿ ರಿಷಬ್ ಶೆಟ್ಟಿಯವರಿಗೆ ಧನ್ಯವಾದಗಳು’ ಎಂದಿದ್ದಾರೆ.

‘ನಟಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಮತ್ತು ಇತರರು ಅಧ್ಭುತವಾಗಿ ನಟಿಸಿದ್ದಾರೆ’ ಎಂದು ಸಿನಿಮಾದಲ್ಲಿ ನಟಿಸಿದವರನ್ನು ಕೊಂಡಾಡಿದ್ದಾರೆ.

‘ತಂತ್ರಜ್ಞರ ತಂಡ ಕೂಡ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಅಜನೀಶ್ ಅವರ ಸಂಗೀತ, ಅರವಿಂದ ಕಷ್ಯಪ್ ಅವರ ಅವರ ಛಾಯಾಗ್ರಹಣ, ಧರಣಿಯವರ ಸಾಹಿತ್ಯ ನಿರ್ದೇಶನ ಮತ್ತು ಅರ್ಜುನ್ ರಾಜ್ ಸಾಹಸ. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಇಡೀ ಹೊಂಬಾಳೆ ತಂಡಕ್ಕೆ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅನುಭವವನ್ನು ವಿವರಿಸಲು ಪದಗಳು ಸಾಲದು. ನಿಮಗೆ ತುಂಬುಹೃದಯದ ಮೆಚ್ಚುಗೆಗಳು’ ಎಂದು ಲ್ಲು ಅರ್ಜುನ್ ಕಾಂತಾರ ಚಾಪ್ಟರ್–1 ಸಿನಿಮಾವನ್ನು ಹೊಗಳಿದ್ದಾರೆ.

‘ಕಾಂತಾರಾ ಅಧ್ಯಾಯ–1’ ಸಿನಿಮಾ ಬಿಡುಗಡೆಯಾಗಿ ಮೂರು ವಾರ ಕಳೆದಿದ್ದು, ₹818 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆ ಮೂಲಕ 2025ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.