ಚಿತ್ರ ಕೃಪೆ: indiapost_dop
ರಿಷಬ್ ಶೆಟ್ಟಿ ನಟಿಸಿ ನಿರ್ದೆಶಿಸಿರುವ ‘ಕಾಂತಾರ ಅಧ್ಯಾಯ1‘ ಟ್ರೇಲರ್ ಬಿಡುಗಡೆ ಬಳಿಕ ಅಂಚೆ ಇಲಾಖೆಯು ವಿಶೇಷ ಕಾರ್ಡ್ ಹಾಗೂ ಲಕೋಟೆಗಳನ್ನು ಅನಾವರಣಗೊಳಿಸಿದೆ.
ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ ಭಾಗಿಯಾಗಿದ್ದರು.
ಭಾರತೀಯ ಅಂಚೆ ಕಚೇರಿ ವಿಭಾಗವು ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ‘ಭಕ್ತಿ ಜಾನಪದ ಮತ್ತು ಸಂಪ್ರದಾಯವನ್ನು ಒಂದುಗೂಡಿಸುವ ಒಂದು ರೋಮಾಂಚಕ ಆಚರಣೆಯಾದ ಭೂತ ಕೋಲ, ಸಾಂಸ್ಕೃತಿಕ ಪರಂಪರೆಗೆ ಅಂಚೆ ಇಲಾಖೆಯು ಮೆಚ್ಚುಗೆ ಸೂಚಿಸಿದೆ.
ಹೊಂಬಾಳೆ ಫಿಲ್ಮ್ಸ್ ಸಹಯೋಗದೊಂದಿಗೆ ಕರ್ನಾಟಕ ಅಂಚೆ ವಿಭಾಗವು ಬಿಡುಗಡೆ ಮಾಡಿದ ವಿಶೇಷ ಲಕೋಟೆ ಮೂಲಕ ‘ಕಾಂತಾರ ಅಧ್ಯಾಯ1‘ ಸಿನಿಮಾಕ್ಕೆ ಜಾಗತಿಕ ಮಟ್ಟದಲ್ಲಿ ಗೆಲುವು ಸಿಗಲಿ' ಎಂದು ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.