ADVERTISEMENT

‘ಕಾಂತಾರ ಅಧ್ಯಾಯ1‘ ಟ್ರೇಲರ್‌ನಲ್ಲಿ ಕನ್ನಡಿಗರ ಮನಗೆದ್ದ ನಟ ಗುಲ್ಶನ್ ದೇವಯ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 12:15 IST
Last Updated 22 ಸೆಪ್ಟೆಂಬರ್ 2025, 12:15 IST
<div class="paragraphs"><p>ಚಿತ್ರ ಕೃಪೆ:<strong><a href="https://www.instagram.com/pragathirishabshetty?hl=en">pragathirishabshetty</a></strong></p></div>

ಚಿತ್ರ ಕೃಪೆ:pragathirishabshetty

   

‘ಕಾಂತಾರ ಅಧ್ಯಾಯ1‘ ಟ್ರೇಲರ್‌ ಇಂದು ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ.

ಟ್ರೇಲರ್‌ನಲ್ಲಿ ಕುಲಶೇಖರ ಎಂಬ ಪಾತ್ರದ ಮೂಲಕ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಕನ್ನಡಿಗರ ಮನ ಗೆದ್ದಿದ್ದಾರೆ.

ADVERTISEMENT

ಈ ಬಗ್ಗೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು 'ಒಂದು ಪಾತ್ರ ನೆನಪಿನಲ್ಲಿ ಉಳಿಯಬೇಕಾದರೆ, ಪದಗಳು ಮಾತನಾಡುವ ಮೊದಲು ನೋಟ ಮಾತನಾಡಬೇಕು. ಕುಲಶೇಖರ ಪಾತ್ರವನ್ನು ರಚಿಸಿರುವುದು ಇದುವರೆಗಿನ ನನ್ನ ಅತ್ಯಂತ ಶಕ್ತಿಶಾಲಿ ಕಲಾತ್ಮಕ ಪ್ರಯಾಣವಾಗಿದೆ' ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಿನಿ ಪ್ರಿಯರು ಕೂಡ ಕುಲಶೇಖರ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಪೌರಣಿಕ ಕಥೆ ಆಧಾರಿತ 'ಕಾಂತಾರ ಅಧ್ಯಾಯ1' ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಈ ಚಿತ್ರವು ಅಕ್ಟೋಬರ್ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

'ಕಾಂತಾರ ಅಧ್ಯಾಯ1'ರಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.