ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ
ಪಿಟಿಐ ಚಿತ್ರ
ಮುಂಬೈ: ಬಾಲಿವುಡ್ ಜೋಡಿ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಉಲ್ಲನ್ ಬಟ್ಟೆಯ ಕಾಲುಚೀಲದ ಫೋಟೊ ಹಂಚಿಕೊಂಡು ‘ನಮ್ಮ ಜೀವನದ ಅತಿದೊಡ್ಡ ಕೊಡುಗೆ, ಶೀಘ್ರದಲ್ಲಿ ಬರಲಿದೆ’ ಎಂದು ಬರೆದುಕೊಂಡಿದ್ದಾರೆ.
ಸಿದ್– ಕಿಯಾರಾ ಪೋಸ್ಟ್‌ಗೆ ಅಭಿಮಾನಿಗಳು, ಬಾಲಿವುಡ್ ತಾರೆಯರು ಶುಭ ಹಾರೈಸಿದ್ದಾರೆ.
2023ರ ಫೆ.7ರಂದು ರಾಜಸ್ಥಾನದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಯಾಗಿದ್ದರು.
ಸದ್ಯ ಸಿದ್ಧಾರ್ಥ್ ಅವರು ಜಾಹ್ನವಿ ಕಪೂರ್ ಜೊತೆಯಾಗಿರುವ ‘ಪರಮ್ ಸುಂದರಿ’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಿಯಾರಾ ಅವರು ಕೊನೆಯದಾಗಿ ರಾಮ್ ಚರಣ್ ಅವರೊಂದಿಗೆ ‘ಗೇಮ್ ಚೇಂಜರ್’ನಲ್ಲಿ ತೆರೆ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.