ADVERTISEMENT

ಅತಿಥಿಗಳಿಗೆ ಕೈಯಾರೇ ಅಡುಗೆ ಮಾಡಿ ಬಡಿಸುವ ಕಿಚ್ಚನ ಕಿಚನ್ ಗುಟ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 5:59 IST
Last Updated 19 ಡಿಸೆಂಬರ್ 2025, 5:59 IST
 ಕಿಚ್ಚ ಸುದೀಪ್ 
ಕಿಚ್ಚ ಸುದೀಪ್    

ಬೆಂಗಳೂರು: ಚಂದನವನದ ತಾರಾ ನಟ ಕಿಚ್ಚ ಸುದೀಪ್ ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಅವರು ನಟಿಸಿರುವ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ರಂದು ಬಿಡುಗಡೆಗೆ ಸಿದ್ಧವಾಗಿದೆ. ಇನ್ನೂ ಸುದೀಪ್ ಅವರು ಅನೇಕ ಸಂದರ್ಭಗಳಲ್ಲಿ ತಮ್ಮ ವ್ಯಕ್ತಿತ್ವದಿಂದಲೂ ಗಮನಸೆಳೆದಿದ್ದಾರೆ.

ಸದ್ಯ, ಕಿಚ್ಚ ಸುದೀಪ್ ಅವರು, ತಾವು ಯಾವ ಕಾರಣಕ್ಕಾಗಿ ಮನೆಗೆ ಬರುವಂತ ಅತಿಥಿಗಳಿಗೆ ಮನೆಯಲ್ಲಿಯೇ ಅಡುಗೆ ಮಾಡಿ ಬಡಿಸುತ್ತೇವೆ? ಅದರ ಮಹತ್ವ ಏನು? ಎಂಬುದರ ಕುರಿತು ಪ್ರಜಾವಾಣಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾವು ಹೊಟೆಲ್, ರೆಸ್ಟೋರೆಂಟ್‌ಗಳಿಗೆ ಹೋಗಿ ಊಟ ಮಾಡುವುದು ಸಾಮಾನ್ಯ, ಆದರೆ, ಮನೆಗೆ ಬರುವ ಅತಿಥಿಗಳಿಗೆ ನಮ್ಮ ಕೈಯಾರೆ ನಾವೆ ಅಡುಗೆ ಮಾಡಿ ಬಡಿಸಬೇಕು. ಹಾಗೆ ಮಾಡುವುದರಿಂದ ವಿಶ್ವಾಸ, ಬಾಂಧವ್ಯ ಉಳಿಯುತ್ತದೆ. ನಾವು ಬಗೆ ಬಗೆಯ ಭೋಜನ ಮಾಡಿಯೇ ಬಡಿಸಬೇಕು ಎಂದೇನು ಇಲ್ಲ. ಸಿಂಪಲ್ ಆಗಿ ಅನ್ನ–ರಸಂ ಮಾಡಿ ಊಟ ಬಡಿಸಿದರೂ ಸಾಕು ಮನೆಗೆ ಬಂದ ಅತಿಥಿಗಳು ಖುಷಿಪಡುತ್ತಾರೆ’ ಎಂದು ಸುದೀಪ್ ಹೇಳಿದರು.

ADVERTISEMENT

‘ಮಾರ್ಕ್ ಸಿನಿಮಾದ ಕುರಿತಾಗಿ ಆರಂಭವಾಗಿರುವ ‘ಮಾರ್ಕ್ ಮ್ಯಾರಥಾನ್’ ಅಭಿಯಾನವನ್ನು ಪ್ರಜಾವಾಣಿಯಂತಹ ಒಂದು ಅತ್ಯನ್ನತ ಸಂಸ್ಥೆ ಜೊತೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ವಿಶೇಷವಾಗಿ, ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ರವೀಂದ್ರ ಭಟ್ ಸರ್ ಹಾಗೂ ಪತ್ರಿಕೆಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಶ್ರೀರಾಮ್ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಅವರು ಸತತ 12ನೇ ಸೀಸನ್‌ಗಳಿಂದ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತೀ ಸೀಸನ್‌ನಲ್ಲೂ ಒಂದು ದಿನ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುದೀಪ್ ಅವರು ತಾವೇ ತಯಾರಿಸಿದ ಅಡುಗೆಯನ್ನು ಕಳಿಸಿಕೊಡು‌ತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.