

‘777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್ ಅವರು ಅನಯಾ ವಸುಧಾ ಅವರ ಜತೆ ನಿನ್ನೆ(ಭಾನುವಾರ) ಕಾಸರಗೋಡಿನ ನಾರಂಪಾಡಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರ ವಿವಾಹ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಭಾಗಿಯಾಗಿ ಶುಭಕೋರಿದ್ದಾರೆ.
ಅನಯಾ ವಸುಧಾ ಅವರ ಜತೆಗಿನ ಅರಿಶಿಣ ಶಾಸ್ತ್ರದ ಚಿತ್ರಗಳನ್ನು ಕಿರಣ್ ರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಮಂಗಳೂರು ಗಡಿಭಾಗ ಕಾಸರಗೋಡು ಮೂಲದವರಾದ ಕಿರಣ್ ರಾಜ್ ಹಾಗೂ ಅನಯಾ ವಸುಧಾ ಅವರು ಕಳೆದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಚಿತ್ರವು 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.