
ನಟಿ ರಚಿತಾ ರಾಮ್
ಚಿತ್ರ: ಇನ್‌ಸ್ಟಾಗ್ರಾಮ್
ಚಂದನವನದ ನಟಿ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಹೊಸ ಜವಾಬ್ದಾರಿ ಒಪ್ಪಿಕೊಂಡ ನಟಿ ರಚಿತಾ ರಾಮ್ ಖಾಕಿ ಬಟ್ಟೆ ಧರಿಸಿ ಆಟೋ ಓಡಿಸಿದ್ದಾರೆ.
ನಟಿ ರಚಿತಾ ರಾಮ್
ಬೆಂಗಳೂರಿನ ಆರ್. ಆರ್. ನಗರದಲ್ಲಿರುವ ನಟಿ ರಚಿತಾ ರಾಮ್ ಮನೆ ಮುಂದೆ ನೂರಾರು ಆಟೋ ಚಾಲಕರು ಬಂದಿದ್ದರು. ವಿಶೇಷವಾಗಿ ಮಹಿಳಾ ಆಟೋ ಚಾಲಕಿಯರು ರಚಿತಾ ರಾಮ್ ಮನೆ ಬಳಿ ಹೋಗಿ ಅವರಿಗೆ ಖಾಕಿ ಬಟ್ಟೆ ತೊಡಿಸಿದ್ದಾರೆ. ಆಗ ರಚಿತಾ ರಾಮ್ ಚಪ್ಪಲಿ ತೆಗೆದು, ಖಾಕಿ ಬಟ್ಟೆ ಧರಿಸಿ, ಆಟೋಗೆ ಕೈ ಮುಗಿದು ಹತ್ತಿದ್ದಾರೆ.
ಇನ್ನು, ಇದೇ ವಿಡಿಯೊವನ್ನು ನಟಿ ರಚಿತಾ ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಅತಿರಥ ಮಹಾರಥ ಸಾರಥಿಗಳಿಗೆ ನನ್ನ ನಮಸ್ಕಾರ. ನನ್ನನ್ನು ಆಟೋ ಚಾಲಕರ ಸಂಘದ ರಾಯಭಾರಿಯಾಗಿ ಆಯ್ಕೆ ಮಾಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಬಹಳ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ನಟಿ ರಚಿತಾ ರಾಮ್ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಬುಲ್ ಬುಲ್’ ಸಿನಿಮಾದ ಮೂಲಕ ಖ್ಯಾತಿ ಪಡೆದುಕೊಂಡಿರುವ ನಟಿ ರಚಿತಾ ರಾಮ್ ಚಂದನವನದಲ್ಲಿ ಕಾರ್ಯನಿರತರಾಗಿದ್ದಾರೆ. ಕೂಲಿ ಸಿನಿಮಾದಲ್ಲಿ ವಿಭಿನ್ನ ಪ್ರಾತದಲ್ಲಿ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚಿಗಷ್ಟೇ ಅಕ್ಟೋಬರ್ 3ರಂದು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.