ADVERTISEMENT

ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 7:39 IST
Last Updated 22 ಜನವರಿ 2026, 7:39 IST
   

‘ಕಾಂತಾರ’ ಚೆಲುವೆ ರುಕ್ಮಿಣಿ ವಸಂತ್ ಅವರು ಲಂಡನ್‌ನ ರಂಗ ತರಬೇತಿಯ ಚಿತ್ರಗಳನ್ನು ಹಂಚಿಕೊಂಡು, ನಟನೆಯ ಕಲಿಕಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ನಟನೆಯ ಲೋಕದಲ್ಲಿ ಮೊದಲ ಅರ್ಹತೆಯನ್ನು ಪಡೆದ ವರ್ಷ (2016) ಇದು. ಡ್ರಾಮಾ ಶಾಲೆಯಿಂದ ನನ್ನ ಮನೆಗೆ ಮರಳಿದ ವರ್ಷ. ನಟನೆಯಲ್ಲಿ ಕೆಲಸಗಳು ಸಿಗುತ್ತವೆಯೋ ಇಲ್ಲವೋ ಎಂಬ ಅನುಮಾನ ಇದ್ದರೂ, ಕೆಲಸ ಸಿಗಲಿದೆ ಎಂಬ ನಿರೀಕ್ಷೆಯನ್ನು ಬಿಟ್ಟುಕೊಡದೇ ಇದ್ದ ವರ್ಷ' ಎಂದು ರಂಗ ತರಬೇತಿಯ ನೆನಪಿನ ಬುತ್ತಿಯನ್ನು ಹಂಚಿಕೊಂಡಿದ್ದಾರೆ.

‘ಇದೇ ವರ್ಷದಲ್ಲಿ ಡ್ರಾಮಾ ಶಾಲೆಯ ಸ್ನೇಹಿತರೊಂದಿಗೆ ಒಂದು ಚಿಕ್ಕ ಸಿನಿಮಾವವನ್ನು ಕೂಡ ಮಾಡಿದ್ದೆ. ನೀವು ಊಹಿಸಲಾಗದಷ್ಟು ನಿಮ್ಮೆಲ್ಲರನ್ನೂ ನೆನಪಿಸಿಕೊಳ್ಳುತ್ತಿದ್ದೇನೆ’ ಎಂದು ಲಂಡನ್‌ ಸ್ನೇಹಿತರನ್ನು ಉಲ್ಲೇಖಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ನನ್ನ ಮಾವನ ಮಕ್ಕಳು ನನ್ನನ್ನು ಅಂಡಮಾನ್‌ಗೆ ಕರೆದುಕೊಂಡು ಹೋಗಿ ಡೈವಿಂಗ್ ಕಲಿಸಿದ್ದರು. ಉಸಿರಾಟವೇ ಎಲ್ಲವೂ ಎಂಬುದನ್ನು ನಾನು ಕಲಿತ ವರ್ಷ ಇದಾಗಿತ್ತು. ಒಬ್ಬಳೇ ಮ್ಯೂಸಿಯಂ‌ಗಳಿಗೆ ಹೋಗಿ ಶೇಕ್ಸ್‌ಪಿಯರ್ ಕಲಾಕೃತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ರಂಗ ತರಬೇತಿಯಲ್ಲಿ ನನ್ನ ವ್ಯಕ್ತಿತ್ವವನ್ನು ಹುಡುಕಲು ಪ್ರಯತ್ನಿಸಿದ ವರ್ಷ. ಕುರ್ತಿಗಳು ಮತ್ತು ತಲೆಗೆ ಹಾಕುವ ಬ್ಯಾಂಡಾನಾದಿಂದ ಹಿಡಿದು, ಹರಿದ ಜೀನ್ಸ್, ಸನ್ ಗ್ಲಾಸ್, ಡೆನಿಮ್ ಜಾಕೆಟ್, ಸ್ನಾಪ್‌ಚಾಟ್ ಫಿಲ್ಟರ್‌ಗಳನ್ನೂ ಪ್ರಯೋಗಿಸಿದ್ದೆ’ ಎಂದಿದ್ದಾರೆ.

‘ನಾನು ಧರಿಸಿದ ಅನೇಕ ಟೋಪಿಗಳು, ಡಿಸ್ಕೋ ಬಾಲ್,  ಫೆಡೋರಾ, ಮತ್ತು ಅಲ್ಬರ್ಟ್ ಐನ್‌ಸ್ಟೈನ್ ಮುಖದ ಮಾಸ್ಕ್ ಇವೆಲ್ಲವೂ ನನ್ನ ಮನಸ್ಸಿಗೆ ಹಿಡಿಸಿದ ವಸ್ತುಗಳಾಗಿದ್ದವು‘ ಎಂದು ಹೇಳಿಕೊಂಡಿದ್ದಾರೆ.

'ಬಘೀರ', 'ಕಾಂತಾರ', 'ಸಪ್ತ ಸಾಗರದಾಚೆಎಲ್ಲೋ, ಚಿತ್ರದ ಮೂಲಕ ಗಮನ ಸೆಳೆದ ರುಕ್ಮಿಣಿ ವಸಂತ್ ಅವರು ಸದ್ಯ, ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.