ADVERTISEMENT

ವಿಚ್ಛೇದನದ ಬಳಿಕ ಹಾಲಿವುಡ್‌ಗೆ ತೆರಳಿದ ಸಮಂತಾ ರುತ್ ಪ್ರಭು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2021, 6:38 IST
Last Updated 26 ನವೆಂಬರ್ 2021, 6:38 IST
ನಿರ್ದೇಶಕ ಫಿಲಿಪ್ ಜಾನ್ ಜತೆಗೆ ಸಮಂತಾ
ನಿರ್ದೇಶಕ ಫಿಲಿಪ್ ಜಾನ್ ಜತೆಗೆ ಸಮಂತಾ   

ಬೆಂಗಳೂರು: ನಟ ನಾಗ ಚೈತನ್ಯ ಜತೆ ವಿಚ್ಛೇದನ ಪಡೆದುಕೊಂಡ ಬಳಿಕ ಚಿತ್ರರಂಗದಿಂದ ತುಸು ವಿರಾಮ ಪಡೆದಿದ್ದ ನಟಿ ಸಮಂತಾ ರುತ್ ಪ್ರಭು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಿದ್ದಾರೆ.

'ಅರೇಂಜ್‌ಮೆಂಟ್ಸ್ ಆಫ್ ಲವ್' ಎಂಬ ಚೊಚ್ಚಲ ಹಾಲಿವುಡ್ ಚಿತ್ರದಲ್ಲಿ ಸಮಂತಾ ಅವರು ತಮಿಳು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಫಿಲಿಪ್ ಜಾನ್ ಜತೆಗೆ ಫೋಟೊ ಒಂದನ್ನು ಸಮಂತಾ ಅವರು ಪೋಸ್ಟ್ ಮಾಡಿದ್ದು, ಹೊಸ ಸಿನಿಮಾದ ಪೋಸ್ಟರ್ ಅನ್ನು ಕೂಡ ಶೇರ್ ಮಾಡಿಕೊಳ್ಳುವ ಮೂಲಕ ಹಾಲಿವುಡ್‌ಗೆ ತೆರಳುತ್ತಿರುವ ಬಗ್ಗೆ ದೃಢಪಡಿಸಿದ್ದಾರೆ.

ADVERTISEMENT

ಹೊಸ ಜಗತ್ತು, ಹೊಸ ಕೆಲಸಕ್ಕೆ ತೆರೆದುಕೊಳ್ಳುತ್ತಿದ್ದೇನೆ.. ವಿಶೇಷ ಅವಕಾಶವೊಂದು ನನ್ನ ಪಾಲಿಗೆ ಬಂದಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಭಾರತೀಯ ಮೂಲದ ಲೇಖಕ ತಿಮೇರಿ ಎನ್. ಮುರಾರಿ ಅವರು 2004ರಲ್ಲಿ ಪ್ರಕಟಿಸಿದ್ದ 'ಅರೇಂಜ್‌ಮೆಂಟ್ಸ್ ಆಫ್ ಲವ್' ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.