
ಸತೀಶ್ ನೀನಾಸಂ ನಟನೆಯ 'ದಿ ರೈಸ್ ಆಫ್ ಅಶೋಕ' ಸಿನಿಮಾದ 'ಮಾದಪ್ಪನ' ಹಾಡಿನ ಕುರಿತು ಗಾಯಕ ಕೈಲಾಶ್ ಖೇರ್ ಅವರು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಮಾದಪ್ಪನ' ಹಾಡನ್ನು ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಗಾಯಕ ಕೈಲಾಶ್ ಖೇರ್, 'ದಿ ರೈಸ್ ಆಫ್ ಅಶೋಕ' ಚಿತ್ರದ ಸತೀಶ್ ನೀನಾಸಂ ಅವರು ನಟನೆ ಮಾತ್ರವಲ್ಲದೆ ಈ ಹಾಡಿನ ಸಾಹಿತ್ಯವನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಇವರು ಸೃಜನಶೀಲ ವ್ಯಕ್ತಿ. ಈ ಚಿತ್ರ ಯಶಸ್ವಿಯಾಗಲಿದೆ‘ ಎಂದಿದ್ದಾರೆ.
ಮಾಲೀಕ ಮತ್ತು ಕೂಲಿ ಕಾರ್ಮಿಕರ ನಡುವಿನ ಕಥೆ, ರೆಟ್ರೊ ಶೈಲಿಯ ಕಥೆಯಾಗಿದೆ. ಕ್ರಾಂತಿಕಾರಿ ಅಶೋಕನ ಪಾತ್ರದಲ್ಲಿ ಸತೀಶ್ ನೀನಾಸಂ ನಟಿಸಿದ್ದಾರೆ.
ಈ ಚಿತ್ರವನ್ನು ಮನು ಶೆಡ್ಡಾರ್ ಅವರು ನಿರ್ದೇಶನ ಮಾಡುತ್ತಿದ್ದು, ಛಾಯಾಚಿತ್ರಗ್ರಹಣ ಲವಿತ್, ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.