
ಬಾಲಿವುಡ್‌ನ ನಟ, ನಟಿಯರು ತಮ್ಮ ಫಿಟ್‌ನೆಸ್ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಶಿಲ್ಪಾ ಶೆಟ್ಟಿಯವರು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಫೋಟೊ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಒಂದು ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿಲ್ಪಾ ಶೆಟ್ಟಿಯವರು ತೋರಿಸಿರುವ ಈ ಆಸನದಲ್ಲಿ ಅವರು, ಒಂದು ಕಾಲನ್ನು ಅಡ್ಡಕ್ಕೆ ಚಾಚಿ ಮತ್ತೊಂದು ಮೊಣಕಾಲನ್ನು ಮಡಿಚಿದ್ದಾರೆ. ಮಡಿಚಿದ ಮೊಣಕಾಲನ್ನು ನೇರವಾಗಿ ಒಂದು ಕೈಯನ್ನು ಕೆನ್ನೆಯ ಮೇಲೆ ಇಟ್ಟಿದ್ದಾರೆ. ಇನ್ನೊಂದು ಕೈಯನ್ನು ಚಾಚಿರುವುದನ್ನು ಕಾಣಬಹುದು.
ಸದ್ಯ ಇನ್‌ಸ್ಟಾಗ್ರಾಂನಲ್ಲಿ ಹೊಸ ಆಸನವೊಂದನ್ನು ಪರಿಚಯಿಸಿರುವ ಶಿಲ್ಪಾ ಶೆಟ್ಟಿಯವರು, ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಲು ಈ ಆಸನ ಸಹಕರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಆಸನದ ಪ್ರಯೋಜನಗಳು:
ಸೊಂಟ, ಕಾಲುಗಳಲ್ಲಿನ ಸ್ನಾಯುಗಳ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ದೇಹದ ಸಮತೋಲನ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಮೊಣಕಾಲುಗಳ ಸ್ನಾಯುಗಳನ್ನು ಬಲಪಡಿಸುತ್ತದೆ.
ಮನಸ್ಸು ಮತ್ತು ದೇಹದ ಉತ್ತಮ ಆರೋಗ್ಯಕ್ಕೆ ಈ ಬಂಗಿ ಸಹಕರಿಸುತ್ತದೆ.
ಬೆನ್ನು ನೋವು, ಸ್ಲಿಪ್ ಡಿಸ್ಕ್ ಅಥವಾ ಮೊಣಕಾಲು ನೋವು ಇದ್ದವರು ಈ ಆಸನವನ್ನುಮಾಡಬಾರದೆಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.