ADVERTISEMENT

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2026, 6:18 IST
Last Updated 29 ಜನವರಿ 2026, 6:18 IST
<div class="paragraphs"><p>ಶಿವರಾಜ್ ಕುಮಾರ್,&nbsp;ದುನಿಯಾ ವಿಜಯ್</p></div>

ಶಿವರಾಜ್ ಕುಮಾರ್, ದುನಿಯಾ ವಿಜಯ್

   

ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ 'ಲ್ಯಾಂಡ್ ಲಾರ್ಡ್' ಚಿತ್ರವು ಜ.23ರಂದು ತೆರೆಗೆ ಬಂದು ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಲ್ಯಾಂಡ್ ಲಾರ್ಡ್' ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಡವ, ಶ್ರೀಮಂತರ ತಾರತಮ್ಯ, ಜಾತಿ ಶೋಷಣೆಯ ಬಗ್ಗೆ ಈ ಸಿನಿಮಾದಲ್ಲಿ ನೋಡಬಹುದು. ಎಲ್ಲಾ ನಟರು ಅದ್ಭುತವಾಗಿ ನಟಿಸಿದ್ದಾರೆ. ಇಷ್ಟು ವರ್ಷ ವಿಜಯ್‌ ಅವರನ್ನು ಬೇರೆ ಪಾತ್ರಗಳಲ್ಲಿ ನೋಡಿದ್ದೆ. ಆದರೆ ಈ ಚಿತ್ರದಲ್ಲಿ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡುವಾಗ ನನ್ನ ನಟನೆಯ ‘ವೇದ’ ನೆನಪಿಗೆ ಬಂತು. ವಿಜಯ್ ಮಗಳು ರಿತನ್ಯಾ ಅವರಿಗೆ ಇದು ಮೊದಲ ಸಿನಿಮಾ ಎಂಬಂತೆ ಕಾಣಿಸುವುದಿಲ್ಲ. ಈ ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಅವರ ನಟನೆ ನೋಡಿ ನನಗೆ ಅಚ್ಚರಿ ಆಯಿತು. ಒಬ್ಬ ನಟ ಯಾವ ಪಾತ್ರ ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇವರೆ ಸಾಕ್ಷಿ. ರಚಿತಾ ರಾಮ್ ಈ ರೀತಿಯ ನಟನೆಯನ್ನು ಇದೆ ಮೊದಲು ಬಾರಿ ನೋಡಿದ್ದು. ಈಗಿನ ಯುವಜನತೆ ನೋಡಲೇಬೇಕಾದ ಚಿತ್ರ 'ಲ್ಯಾಂಡ್ ಲಾರ್ಡ್' ಎಂದು ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.

ADVERTISEMENT

‘ಇಂದಿನ ಕಾಲದಲ್ಲಿ ನಾನು, ನನ್ನ ಕುಟುಂಬ ಮಾತ್ರ ಚೆನ್ನಾಗಿ ಇರಬೇಕು ಎಂದು ಬಯಸುವವರೇ ಹೆಚ್ಚು. ಅದರ ಹೊರತಾಗಿ, ಎಲ್ಲರೂ ನಮ್ಮವರೇ ಎಂದು ತಿಳಿದು ಬದುಕಬೇಕು. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಲ್ಲಿ ಆದ ಸಹಾಯ ಮಾಡಬೇಕು. ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಹೊಸ ಹೊಸ ವಿಷಯದ ಚಿತ್ರಗಳು ಬರಬೇಕು. ಒಟ್ಟಾರೆ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು’ ಎಂದು ಹೇಳಿದ್ದಾರೆ. 

ನಿರ್ದೇಶಕ ಜಡೇಜ ಕೆ.ಹಂಪಿ ನಿರ್ದೇಶನ ಮಾಡಿದ್ದು, ಕೆ.ವಿ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಅವರು ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.