ADVERTISEMENT

ಮಗಳು ನಿವೇದಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಶಿವರಾಜ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 9:44 IST
Last Updated 16 ಡಿಸೆಂಬರ್ 2025, 9:44 IST
   

ನಟ ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ  ನಿವೇದಿತಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆ ಶಿವಣ್ಣ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ   ಶುಭಕೋರಿದ್ದಾರೆ.

ಮಗಳ ಹುಟ್ಟು ಹಬ್ಬಕ್ಕೆ ಶುಭಕೋರಿದ ನಟ ಶಿವರಾಜ್ ಕುಮಾರ್ ಅವರು, ‘ಕಿರು ಬೆರಳು ಹಿಡಿದು ನಡೆಯುತ್ತಿದ್ದ ಪುಟ್ಟ ಹುಡುಗಿ, ಹೆಗಲ ಮೇಲೆ ಜವಾಬ್ದಾರಿ ಹೊರುವಷ್ಟು ಸಮರ್ಥಳಾದೆ, ಸಿನೆಮಾ ಪ್ರೊಡ್ಯೂಸ್ ಮಾಡುವಷ್ಟು ಬೆಳೆದು ನಿಂತೆ. ನಿನ್ನ ಬೆಳವಣಿಗೆ ನನಗೆ ಹೆಮ್ಮೆ ಮಗಳೇ. ಯಾವತ್ತೂ ಖುಷಿಯಾಗಿರು’ ಎಂದು ಶುಭಕೋರಿದ್ದಾರೆ.

ನಿವೇದಿತಾ ಅವರು 'ಅಂಡಮಾನ್' ಚಿತ್ರದಲ್ಲಿ ಚುಮ್ಮಿ ಎಂಬ ಪಾತ್ರದಲ್ಲಿ ತಂದೆ ಶಿವರಾಜ್ ಕುಮಾರ್ ಜತೆ ನಟಿಸಿದ್ದರು. ಬಳಿಕ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ‘ಫೈರ್ ಫ್ಲೆ’ ಚಿತ್ರ ನಿರ್ಮಾಣದ ಮೂಲಕ ಮತ್ತೆ ಸಿನಿಮಾರಂಗದ ಕಡೆ ಒಲವು ತೋರಿದ್ದಾರೆ.

ನಿವೇದಿತಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣ ಮಾತ್ರವಲ್ಲದೇ ವೆಬ್ ಸರಣಿಯನ್ನು ನಿರ್ಮಿಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.