ADVERTISEMENT

ಕಾಡುವ ಸಿನಿಮಾಗಳ ಹೂರಣ: ಎಸ್‌.ಎಲ್‌ ಭೈರಪ್ಪ ಅವರ ಸಾಮಾಜಿಕ ಕಳಕಳಿ ಕಥೆಯ ಆಶಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 12:43 IST
Last Updated 24 ಸೆಪ್ಟೆಂಬರ್ 2025, 12:43 IST
<div class="paragraphs"><p>ಚಿತ್ರ ಕೃಪೆ:&nbsp;ಯೂಟ್ಯೂಬ್</p></div>

ಚಿತ್ರ ಕೃಪೆ: ಯೂಟ್ಯೂಬ್

   

ಎಸ್‌.ಎಲ್‌.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ಅನೇಕ ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲವು ಸಿನಿಮಾಗಳಾಗಿ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ವಂಶವೃಕ್ಷ

ADVERTISEMENT

ಕಾದಂಬರಿ ಆಧಾರಿತ ವಂಶವೃಕ್ಷ ಚಲನಚಿತ್ರವು 1972ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಕಾತ್ಯಾಯಿನಿ ಪಾತ್ರ ಪ್ರಮುಖ ಕಥಾವಸ್ತುವಾಗಿದೆ.

ಕಾತ್ಯಾಯಿನಿ ಎಂಬ ವಿಧವೆಯು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಕುಟುಂಬದ ಗೌರವದ ನಡುವೆ ಭಾವನಾತ್ಮಕ ಸಂಘರ್ಷವನ್ನು ಈ ಚಿತ್ರದಲ್ಲಿ ಕಾಣಬಹುದು.

ಒಬ್ಬ ವಿಧವೆ ಮರು ವಿವಾಹ ಆದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನದ ಸಾಮಾಜಿಕ ಪೀಡುಗಳ ಬಗ್ಗೆ ಈ ಸಿನಿಮಾದಲ್ಲಿ ಕಾಣಬಹುದು.

ವಂಶವೃಕ್ಷ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನವನ್ನು ಬಿ.ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್ ಮಾಡಿದ್ದಾರೆ.

ಎಲ್. ವಿ. ಶಾರದಾ, ವಿಷ್ಣುವರ್ಧನ್ ಮತ್ತು ಉಮಾ ಶಿವಕುಮಾರ್ ಅನೇಕರು ಬಣ್ಣ ಹಚ್ಚಿದ್ದಾರೆ.

ಸಿನಿಮಾವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಫಿಲ್ಮ್‌ಫೇರ್ ಪ್ರಶಸ್ತಿ, ಅತ್ಯುತ್ತಮ ಕನ್ನಡ ಚಿತ್ರ , ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ತಬ್ಬಲಿಯು ನೀನಾದೆ ಮಗನೆ

1977 ರಲ್ಲಿ ಬಿಡುಗಡೆಯಾದ ‘ತಬ್ಬಲಿಯು ನೀನಾದೆ ಮಗನೆ‘ ಚಿತ್ರವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್ ನಿರ್ದೇಶಿಸಿದ್ದಾರೆ.

ಈ ಸಿನಿಮಾದಲ್ಲಿ ಕಾಳಿಂಗ ಎಂಬ ಯುವಕ ಹಾಗೂ ಅಮೇರಿಕನ್ ಮಹಿಳೆ ಹಿಲ್ಡಾ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ.

ವಿದೇಶಿ ಮಹಿಳೆಯನ್ನು ವಿವಾಹ ಆದ ಬಳಿಕ ಗ್ರಾಮಸ್ಥರ ನಿಂದನೆಗೆ ಒಳಗಾವುದು. ಧಾರ್ಮಿಕ ವಿಧಿಗಳನ್ನು ಪಾಲಿಸದ ಅವಳನ್ನು ಸಮಾಜದಿಂದ ದೂರ ಇಡಲು ಪ್ರಯತ್ನಿಸಿದಾಗ ಅವಳ ನಿಲುವುಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ.

ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಲಕ್ಷ್ಮೀ ಕೃಷ್ಣಮೂರ್ತಿ, ಪೌಲಾ ಲಿಂಡ್ಸೆ ಸೇರಿದಂತೆ ಅನೇಕರು ನಟಿಸಿದ್ದಾರೆ.

ಫಿಲ್ಮ್‌ಫೇರ್ ಪ್ರಶಸ್ತಿ, 'ಅತ್ಯುತ್ತಮ ನಟ', 'ಅತ್ಯುತ್ತಮ ಸಿನಿಮಾಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ

ಎಸ್.ಪಿ. ರಾಮನಾಥನ್ ಅತ್ಯುತ್ತಮ ಧ್ವನಿಮುದ್ರಿಕೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ನಾಯಿ ನೆರಳು

ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು‘ ಸಿನಿಮಾವು 2006ರಲ್ಲಿ ಬಿಡುಗಡೆಯಾಯಿತು. ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹಿಂದೂ ಧರ್ಮದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆಯ ಹಾಗೂ ಸ್ತ್ರೀಯರ ಸಂಕಷ್ಟ, ವೈಚಾರಿಕತೆಯ ಕೊರತೆ, ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳಲ್ಲಿನ ಗೊಂದಲ ಈ ಚಿತ್ರದಲ್ಲಿ ಕಾಣಬಹದು. ಇದು ಜನ್ಮಾಂತರದ ಕಲ್ಪನೆ ಮತ್ತು ಅದರ ಸುತ್ತ ಬೆಳೆಯುವ ಗೊಂದಲಗಳ ಅನ್ವೇಷಣೆಯೂ ಆಗಿದೆ.

ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಮತದಾನ

ಕಾದಂಬರಿ ಆಧಾರಿತ ‘ಮತದಾನ‘ 2001ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಟಿ.ಎನ್. ಸೀತಾರಾಮ್ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಗೆ ಅಧಿಕಾರ ಸಿಕ್ಕಾಗ ಸದುಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುವ ರಾಜಕಾರಣಿಗಳ ಬಗ್ಗೆ ಹೇಳುವಂತಿದೆ.

ಈ ಸಿನಿಮಾವು ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅನಂತ್ ನಾಗ್, ದೇವರಾಜ್, ತಾರಾ, ಅವಿನಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.