ADVERTISEMENT

ಹಾಸ್ಯ ಕಲಾವಿದ ರಾಜ್​ಪಾಲ್ ಯಾದವ್ ಸಹಾಯಕ್ಕೆ ಧಾವಿಸಿದ ಸೋನು ಸೂದ್: ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 11:57 IST
Last Updated 10 ಫೆಬ್ರುವರಿ 2026, 11:57 IST
<div class="paragraphs"><p>ರಾಜ್​ಪಾಲ್ ಯಾದವ್,&nbsp;ಸೋನು ಸೂದ್</p></div>

ರಾಜ್​ಪಾಲ್ ಯಾದವ್, ಸೋನು ಸೂದ್

   

ಚಿತ್ರ: ಇನ್‌ಸ್ಟಾಗ್ರಾಂ

ಇತ್ತೀಚೆಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್ ಅವರಿಗೆ ಸಹಾಯ ಮಾಡಲು ಸೋನು ಸೂದ್ ಮುಂದಾಗಿದ್ದಾರೆ.

ADVERTISEMENT

ಬರೋಬ್ಬರಿ ₹9 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವು ರಾಜ್​​ಪಾಲ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ. ಜೈಲಿಗೆ ಹೋಗುವ ಮುನ್ನ ರಾಜ್‌ಪಾಲ್‌ ಅವರು ತಮ್ಮ ಬಳಿ ಹಣವನ್ನು ಮರುಪಾವತಿಸಲು ಹಣವಿಲ್ಲ ಮತ್ತು ಬೇರೆ ದಾರಿ ಕಾಣುತ್ತಿಲ್ಲ, ಸಹಾಯ ಕೇಳಲು ನನಗೆ ಸ್ನೇಹಿತರಿಲ್ಲ ಎಂದು ಬೇಸರಿಸಿದ್ದರು.

ಸೋನು ಸೂದ್ ಪೋಸ್ಟ್

ಆ ಬೆನ್ನಲ್ಲೆ ಸೋನು ಸೂದ್ ಅವರು ರಾಜ್​ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೋನು ಸೂದ್, ‘ರಾಜ್‌ಪಾಲ್ ಯಾದವ್ ಒಬ್ಬ ಪ್ರತಿಭಾನ್ವಿತ ನಟ. ಅವರು ನಮ್ಮ ಚಿತ್ರರಂಗಕ್ಕೆ ವರ್ಷಗಳ ಕಾಲ ಮರೆಯಲಾಗದ ನೆನಪುಗಳನ್ನು ನೀಡಿದ್ದಾರೆ. ಕೆಲವೊಮ್ಮೆ ಸಂದರ್ಭಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿಬಿಡುತ್ತವೆ. ಈಗ ಅವರು ತೊಂದರೆಗೆ ಸಿಲುಕಿದ್ದಾರೆ. ಈಗ ನಟರು, ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು ಒಟ್ಟಾಗಿ ನಿಲ್ಲುವ ಕ್ಷಣ ಎಂದು ನಾನು ನಂಬುತ್ತೇನೆ. ಸಣ್ಣ ಮುಂಗಡ ಮೊತ್ತವನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.