ಹೈದರಾಬಾದ್: ಎಸ್.ಎಸ್.ರಾಜಮೌಳಿ ನಿರ್ದೆಶನದ, ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮುಂಬರುವ ಚಿತ್ರದ ತಾತ್ಕಾಲಿಕ ಅಧಿಕೃತ ಹೆಸರು ಘೋಷಣೆಯಾಗಿದೆ.
ನಿನ್ನೆ(ಶನಿವಾರ) ಮಹೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಜಮೌಳಿ, ಚಿತ್ರಕ್ಕೆ ತಾತ್ಕಾಲಿಕ ಹೆಸರನ್ನು ಘೋಷಿಸಿದ್ದಾರೆ.
‘SSMB29‘ ಎಂದು ಚಿತ್ರಕ್ಕೆ ನಾಮಕರಣ ಮಾಡಿದ್ದು, ಇದು ತಾತ್ಕಾಲಿಕ ಸಿನಿಮಾದ ಹೆಸರಾಗಿದ್ದು ಶೀಘ್ರದಲ್ಲಿಯೇ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸುತ್ತೇವೆ ಎಂದು ರಾಜಾಮೌಳಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಮುಖ ಕಾಣದಂತೆ ಮಹೇಶ್ ಬಾಬು ಅವರ ಕೊರಳಿನಲ್ಲಿ ಡಮರುಗ, ನಂದಿ, ತ್ರಿಶೂಲ ಹೊಂದಿರುವ ಸರಮಾಲೆಯನ್ನು ಧರಿಸಿದ್ದಾರೆ. ಈ ಮೂಲಕ ಸಿನಿ ಪ್ರೇಕ್ಷಕರಿಗೆ ಸಿನಿಮಾ ವಿಭಿನ್ನವಾಗಿ ಮೂಡಿಬರಲಿದೆ ಎಂಬ ಸೂಚನೆಯನ್ನು ರಾಜಾಮೌಳಿ ನೀಡಿದ್ದಾರೆ.
ಚಿತ್ರಕ್ಕೆ ಸಂಬಂಧಿಸಿದ ಕೆಲವು ಅಪ್‌ಡೇಟ್ಸ್‌ಗಳನ್ನು ನವೆಂಬರ್‌ನಲ್ಲಿ ತಿಳಿಸಲಾಗುವುದು ಎಂದೂ ಹೇಳಿದ್ದಾರೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲ.
ನಟ ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ನಟನೆಯ RRR ಸಿನಿಮಾ ಬಳಿಕ ರಾಜಾಮೌಳಿ ಮತ್ತು ಮಹೇಶ್ ಬಾಬು ಜತೆಗಿನ ಮೊದಲ ಕಾಂಬಿನೇಷನ್ ಚಿತ್ರ ಇದಾಗಿದೆ.
ಜನವರಿ 2024ರಲ್ಲಿ ಬಿಡುಗಡೆಯಾದ ಗುಂಟೂರ್ ಕಾರಮ್ ಚಿತ್ರದಲ್ಲಿ ಮಹೇಶ್ ಬಾಬು ಕೊನೆದಾಗಿ ಕಾಣಿಸಿಕೊಂಡಿದ್ದರು. SSMB29‘ ಚಿತ್ರದ ಬಿಡುಗಡೆ ದಿನಾಂಕ ಸೇರಿದಂತೆ ತಾರಾಗಣದ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.