ADVERTISEMENT

ಹೇಗಿದ್ದವರು ಹೇಗಾದರು ಗೊತ್ತಾ ನಮ್ಮ ಈ ಸ್ಟಾರ್ ಮಣಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 12:40 IST
Last Updated 11 ಫೆಬ್ರುವರಿ 2026, 12:40 IST
   

ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎಂಬುದು ಎಷ್ಟೋ ಯುವಕ ಯುವತಿಯರ ಕನಸಾಗಿರುತ್ತದೆ. ಅದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆದಕ್ಕೆ ಅದರದೇ ಆದ ಪರಿಶ್ರಮ, ನಟನಾ ಕೌಶಲ್ಯವಿರಬೇಕಾಗುತ್ತದೆ. ಎಲ್ಲಿಂದಲೋ ವೃತ್ತಿ ಆರಂಭಿಸಿ, ಸಣ್ಣ ಪಾತ್ರದಿಂದ ಪರದೆ ಮೇಲೆ ಕಾಣಿಸಿಕೊಂಡು ಇಂದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್‌ ಆಗಿ ಬೆಳೆದು, ಜನರ ಮೆಚ್ಚುಗೆ ಗಳಿಸಿದವರು ಹಲವರು. ಕನ್ನಡ ಚಿತ್ರರಂಗದಲ್ಲೂ ಅಂತಹವರು ಅನೇಕರಿದ್ದಾರೆ. ಅವರ ಬಗ್ಗೆ ಮಾಹಿತಿ ಇಲ್ಲಿದೆ.

ಯಶ್ 

<div class="paragraphs"><p>ಚಿತ್ರ ಕೃಪೆ; ಪ್ರಜಾವಾಣಿ</p></div>

‌ಯಶ್ 

‘ರಾಕಿಂಗ್‌ ಸ್ಟಾರ್‌’ ಎಂದೇ ಖ್ಯಾತಿ ಪಡೆದ ಯಶ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಧಾರಾವಾಹಿಯ ಮೂಲಕ. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶೋಕ್ ಕಶ್ಯಪ್ ನಿರ್ದೇಶನದ ‘ಗೋಕುಲ’ ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದರು. ನಂತರ ‘ಮಳೆಬಿಲ್ಲು’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ‘ಜಂಭದ ಹುಡುಗಿ’ ನಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ಯಶ್ ‘ಮೊಗ್ಗಿನ ಮನಸ್ಸು’ ಸಿನಿಮಾದಲ್ಲಿ ನಾಯಕ ನಟನಾಗಿ ರಾಧಿಕಾ ಪಂಡಿತ್‌ ಜೊತೆಗೆ ಚಿತ್ರರಂಗವನ್ನು ಪ್ರವೇಶಿಸಿದರು. ಇಂದು ಫ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಪ್ರಮುಖ ಸಿನಿಮಾಗಳಾದ ರಾಜಾಹುಲಿ, ಕಿರಾತಕ, ಕೆಜಿಎಫ್‌, ಡ್ರಾಮಾ, ಗೂಗ್ಲಿ ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್‌ ಬಿಡುಗಡೆಗೆ ಸಿದ್ಧವಾಗಿದೆ.

ADVERTISEMENT

ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್

ರೋಮ್ಯಾಂಟಿಕ್ ನಿನಿಮಾಗಳ ಮೂಲಕ ಜನರ ಗಮನ ಸೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಮೊದಲು ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಟೈಮ್’ ಎಂಬ ಟಾಕ್-ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 2002ರಲ್ಲಿ ‘ಟಪೋರಿ’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಮಾಗೆ ಬಂದರು. ನಾಯಕ ನಟನಾಗಿ 2006ರಲ್ಲಿ ತೆರೆಕಂಡ ‘ಚೆಲ್ಲಾಟ’ ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಮುಂಗಾರು ಮಳೆ ಸಿನಿಮಾದ ಮೂಲಕ ಖ್ಯಾತಿಗಳಿಸಿದರು. ‘ಚೆಲುವಿನ ಚಿತ್ತಾರ’, ‘ಗಾಳಿಪಟ’, ‘ಶ್ರಾವಣಿ ಸುಬ್ರಹ್ಮಣ್ಯ’, ‘ಚಮಕ್’, ‘ಸಕತ್‌’ ಮುಂತಾದ ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದರು. 

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಪ್ರಸ್ತುತ ಹಿಂದಿಯ ನಟಿಯಾಗಿರುವ ದೀಪಿಕಾ ಪಡುಕೋಣೆ ತಮ್ಮ ಸಿನಿ ಪಯಣವನ್ನು ಆರಂಭಿಸಿದ್ದು ಕನ್ನಡ ಚಿತ್ರರಂಗದ ಮೂಲಕ ಎಂಬುದು ವಿಶೇಷ. ಮೊದಲಿಗೆ ಇಂದ್ರಜಿತ್ ಲಂಕೇಶ್‌ ನಿರ್ದೇಶನದ ಸಿನಿಮಾ ‘ಐಶ್ವರ್ಯ’ ದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಿದ್ದಾರೆ. ಬಳಿಕ ಹಿಂದಿಯ ಪ್ರಮುಖ ಸಿನಿಮಾಗಳಾದ ‌‘ಓಂ ಶಾಂತಿ, ಯೇ ಜವಾನಿ ಹೈ ದೀವಾನಿ, ಚೆನೈ ಎಕ್ಸ್‌ಪ್ರಸ್, ಪದ್ಮಾವತ್, ಪಠಾಣ್‌, ಜವಾನ್‌, ಬಾಜಿರಾವ್‌, ಮಸ್ತಾನಿ ಸೇರಿದಂತೆ ಇತರೆ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದರ್ಶನ್ ತೂಗುದೀಪ

ದರ್ಶನ್ ತೂಗುದೀಪ

ಅಭಿಮಾನಿಗಳು ‘ಡಿ ಬಾಸ್’ ಎಂದೇ ಕರೆಯುವ ದರ್ಶನ್ ‌ಕನ್ನಡ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1990ರ ದಶಕದಲ್ಲಿ ‘ದೇವರ ಮಗ’, ‘ಎಲ್ಲಾರ ಮನೆ ದೋಸೆನು’, ‘ಭೂತಯ್ಯನ ಮಕ್ಕಳು’ ಇತರೆ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 'ಮೆಜೆಸ್ಟಿಕ್' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ಹಿಟ್‌ ಸಿನಿಮಾಗಳಾದ ಕರಿಯಾ, ಸಾರಥಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್‌ಬುಲ್, ಕಾಟೇರ, ದಿ.ಡೆವಿಲ್‌ ಸೇರಿದಂತೆ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಸುದೀಪ್‌

ಸುದೀಪ್‌

‘ಅಭಿನಯ ಚಕ್ರವರ್ತಿ’ ಎಂದು ಕರೆಯುವ ಸುದೀಪ್‌ ಬಹುಭಾಷಾ ನಟರಾಗಿದ್ದಾರೆ. ಇವರು ತಮ್ಮ ಸಿನಿ ಪಯಾಣವನ್ನು ‘ತಾಯವ್ವ’ ಚಿತ್ರದ ಮೂಲಕ ಆರಂಭಿಸಿದರು. ನಂತರ ‘ಪ್ರತ್ಯರ್ಥ’, ‘ಸ್ಪರ್ಶ’, ‘ಹುಚ್ಚ’ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನರಿಂದ ಮನ್ನಣೆಗಳಿಸಿದರು. 2006ರಲ್ಲಿ ‘ಮೈ ಆಟೋಗ್ರಾಫ್’ ಸಿನಿಮಾದಲ್ಲಿ ನಟನೆ ಮತ್ತು ನಿರ್ದೇಶನ ಮಾಡಿದ್ದಾರೆ. ‘ಕಿಚ್ಚ’, ‘ಸ್ವಾತಿ ಮುತ್ತು’, ‘ರಂಗ ಎಸ್.ಎಸ್.ಎಲ್.ಸಿ’, ‘ನಲ್ಲ’, ‘ಪೈಲ್ವಾನ್’, ‘ವಿಕ್ರಾಂತ್ ರೋಣ’, ‘ಕಬ್ಜ’, ‘ಮ್ಯಾಕ್ಸ್’ ಸೇರಿದಂತೆ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ. 

ರಚಿತಾ ರಾಮ್

ರಚಿತಾ ರಾಮ್

‘ಡಿಂಪಲ್ ಕ್ವೀನ್’ ರಚಿತಾ ರಾಮ್ ಮೊದಲಿಗೆ ಭರತನಾಟ್ಯ ಕಲಾವಿದೆಯಾಗಿ 50ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ‘ಅರಸಿ’ ಎಂಬ ಧಾರಾವಾಹಿಯ ಮೂಲ ಟಿವಿ ಪರದೆ ಮೇಲೆ ಕಾಣಿಸಿಕೊಂಡರು. ನಂತರ ದರ್ಶನ್‌ ಜತೆಗೆ ನಟಿಸಿದ ‘ಬುಲ್‌ಬುಲ್‌’ ಸಿನಿಮಾ ಮೂಲಕ ಖ್ಯಾತಿ ಪಡೆದರು. ‘ರನ್ನ’, ‘ರಥಾವರ’, ‘ಚಕ್ರವ್ಯೂಹ’, ‘ಜಗ್ಗು ದಾದಾ’, ‘ಮುಕುಂದ ಮುರಾರಿ’ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದುನಿಯಾ ವಿಜಯ್

ದುನಿಯಾ ವಿಜಯ್

ದುನಿಯಾ ವಿಜಯ್‌ ಮೊದಲು ಚಿಕ್ಕ ಪಾತ್ರ ಹಾಗೂ ಸ್ಟಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸುದೀಪ್‌ ಅವರ ‘ರಂಗ ಎಸ್‌ಎಸ್‌ಎಲ್‌ಸಿ’ ನಿನಿಮಾದಲ್ಲಿ ನಟಿಸುವ ಮೂಲ ಚಿತ್ರರಂಗಕ್ಕೆ ಪ್ರವೇಶಿಸಿದರು. 2007ರಲ್ಲಿ ‘ದುನಿಯಾ’ ಸಿನಿಮಾ ಮೂಲಕ ನಾಯಕ ನಟನಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಮುಖ್ಯವಾಗಿ ಸಲಗ, ಭೀಮಾ, ಸಿಂಹಾದ್ರಿ, ಜಾಕ್ಸನ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ  

ಡಾರ್ಲಿಂಗ್ ಕೃಷ್ಣ  

‘ಕೃಷ್ಣ ರುಕ್ಮಿಣಿ’ ಧಾರಾವಾಹಿ  ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಡಾರ್ಲಿಂಗ್ ಕೃಷ್ಣ ಮೊದಲಿಗೆ ‘ಮದರಂಗಿ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಬಳಿಕ ಲವ್ ಮಾಕ್ಟೇಲ್‌, ಲವ್ ಮಾಕ್ಟೇಲ್‌ 2, ಲಕ್ಕಿ ಮ್ಯಾನ್, Mr. ಬ್ಯಾಚುಲರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಿಷಬ್‌ ಶೆಟ್ಟಿ

ನಟನಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ ರಿಷಬ್‌ ಶೆಟ್ಟಿ ವರು ಅವರು ಬಾಲ್ಯದಿಂದಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಲೂಸಿಯ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಬ್ ನಂತರ, ಉಳಿದವರು ಕಂಡಂತೆ’ ಮೂಲಕ ನಾಯಕ ನಟನಾಗಿ ಸಿನಿ ಪಯಣ ಆರಂಭಿಸಿದ್ದರು. ಇವರಲ್ಲದೆ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಕೂಡ ಸಣ್ಣ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಈಗ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.