
ಚಿತ್ರ ಕೃಪೆ:

ಕನ್ನಡ ಚಿತ್ರರಂಗದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿದೇಶಕರಾಗಿ 50 ವರ್ಷ ತುಂಬಿರುವುದರಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು.
‘ಬಂಧನ’ ಸಿನಿಮಾದ ಮೂಲಕ ಮನ ಗೆದ್ದ ನಟಿ ಸುಹಾಸಿನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನನ್ನನ್ನು ರಾಜೇಂದ್ರ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು ಎಂದರು.
ಮುತ್ತಿನಹಾರ’ ಸೇರಿ ಅನೇಕ ಸಿನಿಮಾದ ಹಾಡುಗಳಿಗೆ ರಾಜೇಂದ್ರ ಸಿಂಗ್ ಬಾಬು ಅವಕಾಶ ಕೊಟ್ಟಿದ್ದರು ಎಂದು ನಿರ್ದೇಶಕ ಹಂಸಲೇಖ ಅವರು ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
‘ಹಿರಿಯರು-ಕಿರಿಯರು ಎಲ್ಲ ಕೂಡಿ ಮಾಡಿದ ಕಾರ್ಯಕ್ರಮ ಒಂದು ಮೌಲ್ಯವಾಗುತ್ತಿರುವ ಈ ದಿನಗಳಲ್ಲಿ ಸಾಧಕರನ್ನು ನೆನೆದು ಸನ್ಮಾನಿಸಿದ್ದು ಅಭಿನಂದನಾರ್ಹ’ ಎಂದು ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಬಂಧನ’, ‘ಮುತ್ತಿನ ಹಾರ’, ‘ಗಂಡು ಭೇರುಂಡ’ ಸೇರಿದಂತೆ ಅನೇಕ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಅವರಿಗೆ ಕಲಾವಿದರ ಸಮ್ಮುಖದಲ್ಲಿ ‘ನಿರ್ದೇಶಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.