ADVERTISEMENT

IMDB ರೇಟಿಂಗ್: ಅಗ್ರ 10ರಲ್ಲಿ ಬಾಲಿವುಡ್‌ನ ಒಂದು, ಕನ್ನಡದ ಮೂರು ಸಿನಿಮಾಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 5:52 IST
Last Updated 15 ಡಿಸೆಂಬರ್ 2022, 5:52 IST
777 ಚಾರ್ಲಿ, ಕೆಜಿಎಫ್‌ ಹಾಗೂ ಕಾಂತಾರ ಸಿನಿಮಾ ದೃಶ್ಯಗಳು
777 ಚಾರ್ಲಿ, ಕೆಜಿಎಫ್‌ ಹಾಗೂ ಕಾಂತಾರ ಸಿನಿಮಾ ದೃಶ್ಯಗಳು   

2022ರಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ 10 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡಾಟಾಬೇಸ್) ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಕನ್ನಡ, ತೆಲುಗಿನ ಮತ್ತು ತಮಿಳಿನ ತಲಾ ಮೂರು ಚಿತ್ರಗಳು ಸ್ಥಾನ ಪಡೆದಿದ್ದು, ಹಿಂದಿಯ ಒಂದೇ ಒಂದು ಸಿನಿಮಾ ಕಾಣಿಸಿಕೊಂಡಿದೆ.

ತೆಲುಗು ನಿರ್ದೇಶನದ ಎಸ್‌.ಎಸ್‌. ರಾಜಮೌಳಿ ಅವರ 'ಆರ್‌ಆರ್‌ಆರ್‌' (ರಣಂ ರೌದ್ರಂ ರುಧಿರಂ) ಸಿನಿಮಾ ಮೊದಲ ಸ್ಥಾನದಲ್ಲಿದ್ದು, ವಿವೇಕ್‌ ಅಗ್ನಿಹೋತ್ರಿ ಅವರ ಹಿಂದಿ ಸಿನಿಮಾ 'ದಿ ಕಾಶ್ಮೀರ್‌ ಫೈಲ್ಸ್‌' ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.ಐಎಂಡಿಬಿಯು ತನ್ನ ವೆಬ್‌ಸೈಟ್‌ನಲ್ಲಿ ನೆಟ್ಟಿಗರು ನೀಡುವ ಪ್ರತಿಕ್ರಿಯೆ ಆಧರಿಸಿ ಸಿನಿಮಾಗಳ ಜನಪ್ರಿಯತೆಯನ್ನು ನಿರ್ಧರಿಸುತ್ತದೆ.

ಐಎಂಡಿಬಿ ಬಿಡುಗಡೆ ಮಾಡಿರುವ 2022ರ ಅಗ್ರ ಹತ್ತು ಜನಪ್ರಿಯ ಸಿನಿಮಾಗಳು
1. ಆರ್‌ಆರ್‌ಆರ್‌ – ತೆಲುಗು (ಟಾಲಿವುಡ್‌)
2. ದಿ ಕಾಶ್ಮೀರ್‌ ಫೈಲ್ಸ್ – ಹಿಂದಿ (ಬಾಲಿವುಡ್‌)
3. ಕೆಜಿಎಫ್‌: ಚಾಪ್ಟರ್‌ 2 – ಕನ್ನಡ (ಸ್ಯಾಂಡಲ್‌ವುಡ್‌)
4. ವಿಕ್ರಂ – ತಮಿಳು (ಕಾಲಿವುಡ್‌)
5. ಕಾಂತಾರ – ಕನ್ನಡ (ಸ್ಯಾಂಡಲ್‌ವುಡ್‌)
6. ರಾಕೆಟ್ರಿ: ದಿ ನಂಬಿ ಎಫೆಕ್ಟ್‌ – ತಮಿಳು (ಕಾಲಿವುಡ್‌)
7. ಮೇಜರ್‌ (ಬಯೋಪಿಕ್‌) –ತೆಲುಗು (ಟಾಲಿವುಡ್‌)
8. ಸೀತಾ ರಾಮಮ್‌ –ತೆಲುಗು (ಟಾಲಿವುಡ್‌)
9. ಪೊನ್ನೀಯನ್‌ ಸೆಲ್ವನ್‌: ಭಾಗ 1 –ತಮಿಳು (ಕಾಲಿವುಡ್‌)
10. 777 ಚಾರ್ಲಿ –ಕನ್ನಡ (ಸ್ಯಾಂಡಲ್‌ವುಡ್‌)

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.