ADVERTISEMENT

ನಟನೆಗೂ ಸೈ..ರಂಗ ನೃತ್ಯಕ್ಕೂ ಸೈ : ರಂಗಕರ್ಮಿ ಬಿ.ಜಯಶ್ರೀ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 8:07 IST
Last Updated 24 ಡಿಸೆಂಬರ್ 2025, 8:07 IST
   

ರಂಗಕರ್ಮಿ ಜಯಶ್ರೀ ಅವರು ನಟನೆ ಹಾಗೂ ಗಾಯನದ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದ್ದಾರೆ.

ಕೆಲ ದಿನಗಳ ಹಿಂದೆ ಅವರು ವೇದಿಕೆ ಮೇಲೆ ರಂಗ ನೃತ್ಯ ಮಾಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ವಿಡಿಯೊ ಹಂಚಿಕೊಂಡ ರಂಗಭೂಮಿ ಕಲಾವಿದೆ ಒಬ್ಬರು, ‘ಚಿತ್ರಪಟ ರಾಮಾಯಣದಿಂದ ಒಂದು ಚಿಕ್ಕ ತುಣುಕು ಇದಾಗಿದೆ. ಒಬ್ಬ ದಿಗ್ಗಜರಿಂದ ಕಲಿಯುವ ಅವಕಾಶ ಸಿಕ್ಕಿರುವುದು ದೊಡ್ಡ ಭಾಗ್ಯ. ಜಯಶ್ರೀ ಅಮ್ಮ ಅವರ ಅಸೀಮ ಪ್ರತಿಭೆಯನ್ನು ನೋಡುವುದರಿಂದ ಪ್ರತಿದಿನವೂ ನನಗೆ ವಿನಮ್ರತೆಯನ್ನು ಕಲಿಸುತ್ತದೆ. ಪ್ರತಿ ಚಲನವಲನದಲ್ಲೂ ಒಂದು ಪಾಠ, ಪ್ರತಿಯೊಂದು ನಗುವೂ ಮಾತಿಲ್ಲದ ಮಾರ್ಗದರ್ಶನ ನೀಡುತ್ತದೆ. ಪ್ರತಿಯೊಬ್ಬರೂ ಜ್ಞಾನ ತುಂಬಿದ ಜೀವಂತ ಪಾಠಪುಸ್ತಕಗಳಂತಿದ್ದಾರೆ . ನಮಗೆ ಪ್ರೇರಣೆ ನೀಡುವವರಿಂದ ಕಲಿಯುವುದು ಜೀವನಪೂರ್ತಿ ಸಾಗುವ ಸಂಭ್ರಮವೆಂಬ ಸ್ಮರಣೆ’ ಎಂದು ಬರೆದುಕೊಂಡು ರಂಗಕರ್ಮಿ ಜಯಶ್ರೀ ಅವರನ್ನು ಹಾಡಿಹೊಗಳಿದ್ದಾರೆ.

ADVERTISEMENT

ಬಿ. ಜಯಶ್ರೀ ಅವರು ರಂಗಭೂಮಿ ಕಲಾವಿದೆಯಾಗಿ ಮಾತ್ರ ಉಳಿಯದೆ ‘ನಾಗಮಂಡಲ’, ‘ಮೂಕಜ್ಜಿಯ ಕನಸುಗಳು’, ‘ಕೇರ್ ಆಫ್ ಫುಟ್‌ಪಾತ್’, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಕದಂಬ’ ಚಿತ್ರದ ‘ಬಂದ ನೋಡಮ್ಮ’, ‘ಯಾರೆ ನೀನು ಚೆಲುವೆ’ ಚಿತ್ರದ ‘ಚಕೋತ ಚಕೋತ’, ‘ಮಾತಾಡ್ ಮಾತಾಡು ಮಲ್ಲಿಗೆ’ ಸಿನಿಮಾದ ‘ಬಾರೋ ನಮ್ಮ ತೇರಿಗೆ’ ಹಾಡು ಸೇರಿದಂತೆ ಅನೇಕ ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.