ADVERTISEMENT

‘ಈ ಸಲ ಯುದ್ಧನೇ ಬೇರೆ’; ಟೀಸರ್ ಮೂಲಕ ಧುರಂಧರ್ 2ಗೆ ಎಚ್ಚರಿಕೆ ಕೊಟ್ರಾ ಯಶ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 6:42 IST
Last Updated 20 ಫೆಬ್ರುವರಿ 2026, 6:42 IST
<div class="paragraphs"><p>ನಟ ಯಶ್,&nbsp;ರಣವೀರ್ ಸಿಂಗ್</p></div>

ನಟ ಯಶ್, ರಣವೀರ್ ಸಿಂಗ್

   

ಚಿತ್ರ: ಯೂಟ್ಯೂಬ್

ಇಂದು (ಫೆ.20) ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ‘ಈ ಸಲ ಯುದ್ಧನೇ ಬೇರೆ’ ಎಂಬ ಖಡಕ್ ಡೈಲಾಗ್ ಮೂಲಕ ಧುರಂಧರ್ 2ಗೆ ನಟ ಯಶ್ ಎಚ್ಚರಿಕೆ ಕೊಟ್ರಾ? ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇತ್ತೀಚೆಗೆ ಧುರಂಧರ್ 2 ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ‘ಧುರಂಧರ್ ದಿ ರಿವೆಂಜ್' ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಟೀಸರ್‌ ಬಿಡುಗಡೆ ಮಾಡಲಾಗಿತ್ತು.

ADVERTISEMENT

ನಟ ಯಶ್

ಇದಲ್ಲದೇ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನವೇ ಧುರಂಧರ್–2 ಕೂಡ ತೆರೆಗೆ ಬರಲು ಸಜ್ಜಾಗಿದೆ. ಹೀಗಾಗಿ ಮಾರ್ಚ್ 19ರಂದು ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಚಿತ್ರರಂಗದ ನಡುವೆ ಭಾರಿ ಪೈಪೋಟಿ ನಡೆಯಲಿದೆ. ಹೀಗಾಗಿ ಟಾಕ್ಸಿಕ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಧುರಂಧರ್ 2ಗೆ ಟಕ್ಕರ್‌ ಕೊಟ್ಟಿದೆ.

‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಆಗ ರಾಯ ಇದಕ್ಕೆ ಉತ್ತರಿಸುತ್ತಾನೆ. ‘ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ’ ಎಂದು ಹೇಳುತ್ತಾನೆ.

ಕೆಜಿಎಫ್: ಅಧ್ಯಾಯ 2ರ ಬ್ಲಾಕ್‌ಬಾಸ್ಟರ್ ಯಶಸ್ಸಿನ ನಂತರ ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 20ನೇ ಶತಮಾನದ ಮಧ್ಯಭಾಗದ ಗೋವಾದಲ್ಲಿ ನಡೆಯುವ ಅಂಡರ್ ವರ್ಡ್‌ನ ಚಿತ್ರಕಥೆಯನ್ನು ಈ ಸಿನಿಮಾ ಹೊಂದಿದೆ.

ಈಗಾಗಲೇ 2025ರಲ್ಲಿ ಧುರಂಧರ್ ಸಿನಿಮಾ ತೆರೆಕಂಡು ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ಬಾಚಿಕೊಂಡಿದೆ. ಹೀಗಾಗಿ ಧುರಂಧರ್ 2 ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತ ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಗ್ಗೆಯೂ ನಿರೀಕ್ಷೆ ಹುಟ್ಟಿಕೊಂಡಿದೆ. ಆದರೆ, ಈ ಎರಡು ಸೂಪರ್‌ ಸ್ಟಾರ್‌ಗಳ ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿದ್ದು, ಎರಡೂ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ.

ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದಲ್ಲಿ ’ಧುರಂಧರ್ 2’ ಮೂಡಿಬರುತ್ತಿದೆ. ಈ ಸಿನಿಮಾವು ರಾಜಕೀಯ, ಭಯೋತ್ಪಾದಕ ಚಟುವಟಿಕೆಗಳು ಹಾಗೂ ಗುಪ್ತಚರ ಕಾರ್ಯಾಚರಣೆಯನ್ನು ಒಳಗೊಂಡಿದೆ. ಆದಿತ್ಯಧರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದವರು ನಟಿಸಿದ್ದಾರೆ.