ತ್ರಿಶಾ
ಚಿತ್ರಕೃಪೆ: ‘ಎಕ್ಸ್‘
ಚೆನ್ನೈ: 'ಸೂರ್ಯ 45' ಚಿತ್ರದಲ್ಲಿ ತಮಿಳು ನಟ ಸೂರ್ಯ ಅವರಿಗೆ ಜತೆಯಾಗಿ ನಟಿ ತ್ರಿಶಾ ಕೃಷ್ಣನ್ ಕಾಣಿಸಿಕೊಳ್ಳಲಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ‘ಡ್ರೀಮ್ ವಾರಿಯರ್‘ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
'ನಿಮ್ಮ ಆಗಮನದಿಂದಾಗಿ 'ಸೂರ್ಯ 45' ಚಿತ್ರತಂಡಕ್ಕೆ ಮತ್ತಷ್ಟು ಉತ್ಸಾಹ, ಉರುಪು ಹೆಚ್ಚಾಗಿದೆ. ಎಲ್ಲರೂ ಒಗ್ಗೂಡಿ ಉತ್ತಮ ಚಿತ್ರ ನಿರ್ಮಾಣ ಮಾಡುವತ್ತ ಗಮನಹರಿಸೋಣ' ಎಂದೂ ನಿರ್ಮಾಣ ಸಂಸ್ಥೆ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಆರ್.ಜೆ ಬಾಲಾಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜನೆ ಮತ್ತು ಜಿಕೆ ವಿಷ್ಣು ಅವರ ಛಾಯಾಗ್ರಹಣವಿದೆ.
ಸುಮಾರು ಎರಡು ದಶಕಗಳ ಬಳಿಕ ಸೂರ್ಯ ಹಾಗೂ ತ್ರಿಶಾ ಜತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳದ್ದಾರೆ. 2005ರಲ್ಲಿ 'ಅರು' ಸಿನಿಮಾದಲ್ಲಿ ಇವರಿಬ್ಬರು ನಟಿಸಿದ್ದರು. ಆ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.
ತ್ರಿಶಾ ಇತ್ತೀಚೆಗೆ ದಳಪತಿ ವಿಜಯ್ ಅವರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಐಡೆಂಟಿಟಿ', 'ವಿದಾಮುಯಾರ್ಚಿ', 'ಥಗ್ ಲೈಫ್', ಚಿತ್ರಗಳಲ್ಲಿ ತ್ರಿಶಾ ಬ್ಯುಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.