
ನವದೆಹಲಿ: ಸಂಜಯ್ ಮಿಶ್ರಾ, ನೀನಾ ಗುಪ್ತಾ ಅಭಿನಯದ 'ವಾಧ್ 2' ಸಿನಿಮಾ 2026ರ ಫೆಬ್ರುವರಿ 6ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಅಂಕುರ್ ಗಾರ್ಗ್ ಮಾಹಿತಿ ನೀಡಿದ್ದಾರೆ.
ಜಸ್ಪಾಲ್ ಸಿಂಗ್ ಸಂಧು ಬರೆದು ನಿರ್ದೇಶಿಸಿರುವ ‘ವಾಧ್‘ ಆಧ್ಯಾತ್ಮಿಕ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಇದರ ಮುಂದುವರಿದ ಭಾಗ 2026ರಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿರುವ ಜಸ್ಪಾಲ್ ಸಿಂಗ್, 'ವಾಧ್ 2' ಬಿಡುಗಡೆಯಾಗುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಹೆಮ್ಮೆ ಆಗುತ್ತಿದೆ. ಈ ಚಿತ್ರಕಥೆಯ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಲವ್ ರಂಜನ್ ಮತ್ತು ಅಂಕುರ್ ಗಾರ್ಗ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಆದಷ್ಟು ಬೇಗ ಚಿತ್ರ ಮಂದಿರಗಳಲ್ಲಿ ಸಿಗೋಣ ಎಂದಿದ್ದಾರೆ.
'ವಾಧ್ 2' ಚಿತ್ರವು ಸಾಮಾನ್ಯ ಜನರ ನಂಬಿಕೆಗಳನ್ನು ಅವರ ಆತ್ಮಸಾಕ್ಷಿ ಮತ್ತು ಧೈರ್ಯವನ್ನು ಪ್ರಶ್ನಿಸುವ ಕಠಿಣ ಸನ್ನಿವೇಶಗಳ ಕಥಾ ಹಂದರವನ್ನು ಹೊಂದಿದೆ ಎಂದು ಅಂಕುರ್ ಗಾರ್ಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.