ಕೀರ್ತಿ ಸುರೇಶ್ ವಿವಾಹ ಸಮಾರಂಭ
ಇನ್‌ಸ್ಟಾಗ್ರಾಂ
2024 ಸಿನಿಮಾ ತಾರೆಯರಿಗೆ ಅದೃಷ್ಟದ ವರ್ಷ ಎನ್ನಬಹುದು. ಈ ವರ್ಷ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ನಟಿ ಸೋನಲ್ ಮೊಂತೆರೋ ಅವರಿಂದ ಹಿಡಿದು ಕಾಲಿವುಡ್ ನಟಿ ಕೀರ್ತಿ ಸುರೇಶ್ ವರೆಗೂ ಹಲವು ಮಂದಿ ಹೊಸ ಜೀವನ ಆರಂಭಿಸಿದ್ದಾರೆ. ಈ ಪೈಕಿ ಪ್ರಮುಖ ಜೋಡಿಗಳ ಚಿತ್ರ/ ಮಾಹಿತಿ ಇಲ್ಲಿವೆ.....
ತರುಣ್ ಸುಧೀರ್–ಸೋನಲ್ ಮೊಂತೆರೊ
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೊ ಅವರು ಈ ವರ್ಷ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಬೆಂಗಳೂರಿನ ಕೆಂಗೇರಿಯ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಇವರ ಮದುವೆ ಸಮಾರಂಭ ಜರುಗಿತ್ತು.
ಕೃತಿ ಕರಬಂಧ–ಪುಲ್ಕಿತ್ ಸಾಮ್ರಾಟ್
‘ಗೂಗ್ಲಿ’ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಕೃತಿ ಕರಬಂಧ ಕೂಡ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 15ರಂದು ಗೆಳೆಯ, ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ಕೃತಿ ವರಿಸಿದ್ದರು.
ರಾಕುಲ್ ಪ್ರೀತ್ ಸಿಂಗ್– ಜಾಕಿ ಭಗ್ನಾನಿ
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ಫೆಬ್ರುವರಿ 21ರಂದು ವಿವಾಹವಾಗಿದ್ದರು. ಗೋವಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬದ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.
ಸೋನಾಕ್ಷಿ ಸಿನ್ಹಾ–ಇಕ್ಬಾಲ್ ಜಹೀರ್
ತಮ್ಮ ಬಹುಕಾಲದ ಗೆಳೆಯ ಇಕ್ಬಾಲ್ ಜಹೀರ್ ಜೊತೆ ನಟಿ ಸೋನಾಕ್ಷಿ ಸಿನ್ಹಾ ಹಸೆಮಣೆಯೇರಿದ್ದರು. ಜೂನ್ 23ರಂದು ಇವರ ವಿವಾಹ ಸಮಾರಂಭ ನಡೆದಿದ್ದು, ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ವರಲಕ್ಷ್ಮಿಶರತ್‌ಕುಮಾರ್–ನಿಕೊಲಾಯ್ ಸಚ್ದೇವ್
ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಮುಂಬೈ ಮೂಲದ ಆರ್ಟ್ ಗ್ಯಾಲರಿಸ್ಟ್ ನಿಕೊಲಾಯ್ ಸಚ್ದೇವ್ ಅವರೊಂದಿಗೆ ಜುಲೈ 2ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಥಾಯ್ಲೆಂಡ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು.
ಸಿದ್ದಾರ್ಥ್–ಅದಿತಿ ರಾವ್ ಹೈದರಿ
ಸೆಪ್ಟೆಂಬರ್‌ನಲ್ಲಿ ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತೆಲಂಗಾಣದ ವಾನಪರ್ತಿಯ ಐತಿಹಾಸಿಕ ರಂಗಸ್ವಾಮಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಅವರು ವಿವಾಹವಾಗಿದ್ದರು. ಕುಟುಂಬ, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ.
ಕೀರ್ತಿ ಸುರೇಶ್– ಆ್ಯಂಟೋನಿ ಥಟ್ಟಿಲ್
ಬಹುಕಾಲದ ಗೆಳೆಯ ಆ್ಯಂಟೋನಿ ಥಟ್ಟಿಲ್ ಅವರೊಂದಿಗೆ ನಟಿ ಕೀರ್ತಿ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 12ರಂದು ಗೋವಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟಂಬ ಸದಸ್ಯರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮೊದಲು ಹಿಂದೂ ಸಂಪ್ರದಾಯದಂತೆ ನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಐಶ್ವರ್ಯ ಸರ್ಜಾ–ಉಮಾಪತಿ ರಾಮಯ್ಯ
ಕನ್ನಡ ಖ್ಯಾತ ನಟ ಅರ್ಜುನ್ ಸರ್ಜಾ ಮಗಳು ಹಾಗೂ ನಟಿ ಐಶ್ವರ್ಯ ಅವರು ತಮಿಳಿನ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ಜೂನ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಇವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಎರಡು ಕುಟುಂಬದ ಬಂಧುಗಳು ಹಾಗೂ ಹತ್ತಿರದ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಆ್ಯಮಿ ಜಾಕ್ಸನ್– ಎಡ್ ವೆಸ್ಟ್‌ವಿಕ್
ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ನಟ ಎಡ್ ವೆಸ್ಟ್‌ವಿಕ್ ಆಗಸ್ಟ್ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿಯಲ್ಲಿ ಮದುವೆಗೆ ನಿಶ್ಚಯಿಸಿರುವುದಾಗಿ ಘೋಷಿಸಿದ್ದ ಜೋಡಿ, ಇಟಲಿಯಲ್ಲಿ ವಾರಾಂತ್ಯ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.