
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ನಟಿ ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಟ್ರೇಲರ್ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಕಲ್ಟ್’ ಚಿತ್ರದಲ್ಲಿ ಝೈದ್ ಅವರು ‘ಮಾಧವ’ ಪಾತ್ರದಲ್ಲಿ ನಟಿಸಿದ್ದಾರೆ.
ಟ್ರೇಲರ್‌ನಲ್ಲಿ ‘ಮಾಧವ ಹಾಗೂ ಗೀತಾ ಕಾಲೇಜು ದಿನಗಳಿಂದಲೂ ಪ್ರೀತಿಯಲ್ಲಿರುತ್ತಾರೆ. ಬಳಿಕ ಇಬ್ಬರ ನಡುವೆ ಬಿರುಕು ಉಂಟಾಗಿ ದೂರ ಆಗಿರುತ್ತಾರೆ. ಪ್ರೀತಿಯಲ್ಲಿ ಮೋಸ ಹೋಗಿ ಮಾಧವ ಕುಡಿತದ ದಾಸನಾಗಿರುತ್ತಾರೆ. ಅದೇ ವೇಳೆ ರಚಿತಾ ರಾಮ್ ಪರಿಚಯದಿಂದ ಸ್ನೇಹಿತರಾಗಿ ನಂತರ ಮನಸ್ತಾಪ ಉಂಟಾಗುವುದನ್ನು ತೋರಿಸಲಾಗಿದೆ.
ಈ ಚಿತ್ರದಲ್ಲಿ ರಚಿತಾ ರಾಮ್ ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ, ಮಲೈಕಾ ವಸುಪಾಲ್ ಅವರು ನಾಟ್ಯ ಕಲಾವಿದೆಯಾಗಿ ನಟಿಸಿದ್ದಾರೆ. ಝೈದ್ ಖಾನ್ ಅವರು ಆರಂಭದಲ್ಲಿ ಕಾಲೇಜ್ ಹುಡುಗನಂತೆ ಕಂಡರೂ ಬಳಿಕ ರಗಡ್ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
ಆಶ್ರಿತ್ ಸಿನಿಮಾಸ್ ಅಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
‘ಮೂರು ಹೊತ್ತು ಲವ್ ಹೆಸರು ಹೇಳ್ಕೊಂಡು ಕುಡ್ಯೋದು ಮಕ್ಕಳೇ ಇರ್‌ಬಹುದು, ಆದ್ರೆ ಕರಳು ಸುಟ್ಟೋಗೋದು ಹೆತ್ತವ್ರದ್ದು ಕಣೋ.’ ಎನ್ನುವ ಡೈಲಾಗ್ ಸದ್ಯ ಟ್ರೆಂಡ್ ಸೃಷ್ಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.