ಸುದೀಪ್
ಕನ್ನಡಿಗರಿಗೆ ಮನರಂಜನೆಯನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕಲರ್ಸ್ ಕನ್ನಡ ಇದೀಗ ‘ಬಿಗ್‌ಬಾಸ್’ನ 12ನೇ ಆವೃತ್ತಿಯನ್ನು ಹೊತ್ತು ತಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್‌ಬಾಸ್’ ರಿಯಾಲಿಟಿ ಶೋ, ಈ ಬಾರಿ ‘Expect the Unexpected’ ಎಂಬ ಧ್ಯೇಯದೊಂದಿಗೆ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿದೆ.
ಬಿಗ್‌ಬಾಸ್ ಲೋಗೋ
ಬಿಗ್‌ಬಾಸ್ ಅದ್ಧೂರಿ ಆರಂಭ ಯಾವಾಗ?
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್ 12ನೇ ಆವೃತ್ತಿ ಆರಂಭವಾಗಲಿದೆ. ಮತ್ತೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಇನ್ನು, ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈಗಾಗಲೇ ಬಿಗ್‌ಬಾಸ್‌ನ 11 ಸೀಸನ್‌ಗಳನ್ನು ನೋಡಿ ಯಶಸ್ವಿಯಾಗಿಸಿರೋ ವೀಕ್ಷಕರ ಮನಸಲ್ಲಿ ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಹೆಚ್ಚಾಗಿದೆ.
ಹೇಗಿರಲಿದೆ ಈ ಬಾರಿಯ ಬಿಗ್‌ಬಾಸ್
ಈ ಬಾರಿ ಬಿಗ್‌ಬಾಸ್ ಸೀಸನ್ 12ರಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರೋ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ. ‘ಬಿಗ್ ಬಾಸ್’ ಹೊಸ ಸೀಸನ್ ಅಂದಮೇಲೆ ವಿಶೇಷ ಇರಲೇಬೇಕು. ಏಕೆಂದರೆ ಬಿಗ್ ಬಾಸ್ ಅಂದ್ರೆನೇ ‘Expect the Unexpected’ ಅಂತ ಹೇಳ್ತಾರೆ ಬಿಗ್ ಬಾಸ್!
ಈ ಸೀಸನ್‌ನ ಪ್ರೋಮೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ‘ಹತ್ತು ಮಿಲಿಯನ್’ಗೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಸದ್ದು ಮಾಡಿವೆ. AI ತಂತ್ರಜ್ಞಾನವನ್ನು ಬಳಸಿ ಹೇಳಿರುವ ಕತೆ ಮತ್ತು ಸುದೀಪ್‌ರ ಹೊಸ ಲುಕ್ ಹಾಗೂ ಸ್ಟೈಲ್ ಎಲ್ಲೆಡೆ ಹೊಸ ಅಲೆಯನ್ನೇ ಎಬ್ಬಿಸಿದೆ.
ಒಂದು ಕಡೆ ಇಡೀ ಕರ್ನಾಟಕ ಹೊಸ ಸೀಸನ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ಕಿಚ್ಚ ಅವರನ್ನು ವಿಭಿನ್ನ ಕಾಸ್ಟ್ಯೂಮ್ಸ್‌ಗಳಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೈ ನವಿರೇಳಿಸೋ ಟಾಸ್ಕ್‌ಗಳು, ಅನಿರೀಕ್ಷಿತ ಸಂದರ್ಭ, ವಾರದಿಂದ ವಾರಕ್ಕೆ ಹೆಚ್ಚಾಗೋ ತಿರುವುಗಳು, ಹೊಸ ಪ್ರಪಂಚವನ್ನೇ ಸೃಷ್ಟಿಸೋಕೆ ಸಜ್ಜುಗೊಳ್ಳುತ್ತಿವೆ.
ಕಿಚ್ಚ ಸುದೀಪ್
ಸತತವಾಗಿ 11 ವರ್ಷಗಳ ಕಾಲ ಯಶಸ್ವಿಯಾಗಿ ಒಂದು ರಿಯಾಲಿಟಿ ಶೋ ನಡೆಸಿಕೊಟ್ಟ ಬೆರಳೆಣಿಕೆಯ ದಿಗ್ಗಜರಲ್ಲಿ ಒಬ್ಬರೆನಿಸಿದ ನಮ್ಮ ಕಿಚ್ಚ, ಈ ಸಲವೂ ಬಿಗ್‌ಬಾಸ್ ಚುಕ್ಕಾಣಿ ಹಿಡಿದು, ತಮ್ಮ ಧ್ವನಿ, ಮೊನಚು ವ್ಯಕ್ತಿತ್ವ, ನಿಬ್ಬೆರಗಾಗಿಸೋ ವೈಖರಿ, ಕಣ್ಸೆಳೆಯುವ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ, ತಪ್ಪಿದೋರನ್ನ ತಿದ್ದೋ ಗಟ್ಟಿತನ, ಪ್ರತಿ ಬಾರಿ ಅವರು ನೀಡೋ ಸಂದೇಶ ಇವೆಲ್ಲವುದನ್ನೂ ನೋಡೋದಕ್ಕೆ ಪ್ರೇಕ್ಷಕರು ಕಾಯ್ತಿದಾರೆ.
‘ಬಿಗ್‌ಬಾಸ್’ ಮನೆಯ ಪ್ರತೀ ಕೋನವೂ, ಕೋಣೆಯೂ ವಿಭಿನ್ನವಾಗಿ ಇರೋ ಹಾಗೆ, ಮನೆಯ ಸದಸ್ಯರೂ ಈ ಸಲ ಡಿಫರೆಂಟೇ. ನಟ–ನಟಿಯರು, ಗಾಯಕರು, ಹಾಸ್ಯ ಕಲಾವಿದರು, ಬಾಣಸಿಗರು ಹೀಗೆ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳು, ಒಂದೇ ಕಡೆ ಒಟ್ಟಾಗಿ ಸೇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.