ADVERTISEMENT

DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 11:35 IST
Last Updated 17 ಜನವರಿ 2026, 11:35 IST
<div class="paragraphs"><p>ನಿರೂಪಕಿ ಅನುಶ್ರೀ, ಅರ್ಜುನ್ ಜನ್ಯ,&nbsp;ಪ್ರೀತಮ್‌</p></div>

ನಿರೂಪಕಿ ಅನುಶ್ರೀ, ಅರ್ಜುನ್ ಜನ್ಯ, ಪ್ರೀತಮ್‌

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಡ್ಯಾನ್ಸರ್ ಪ್ರೀತಮ್‌ಗೆ ಸಂಗೀತ ಸಂಯೋಜಕ, ತೀರ್ಪುಗಾರರಾಗಿರುವ ಅರ್ಜುನ್ ಜನ್ಯ ಅವರು ಬಂಗಾರದ ಬ್ರಾಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ADVERTISEMENT

ಜೀ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ‘ಕೆಜಿಎಫ್’ ಸಿನಿಮಾದ ‘ಸಲಾಂ ರಾಕಿ ಬಾಯ್’ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ ಪ್ರೀತಮ್‌. ಈ ಹಿಂದೆ ಮೆಗಾ ಆಡಿಷನ್ ಸಮಯದಲ್ಲಿ ಡಿಕೆಡಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ಗದಗ ಜಿಲ್ಲೆಯ ಪ್ರೀತಮ್‌ ತನ್ನ ಡ್ಯಾನ್ಸ್ ಮೂಲಕ ಮನ ಗೆದಿದ್ದ. ಕೇವಲ 7 ವರ್ಷದ ಪ್ರೀತಮ್‌ ಡ್ಯಾನ್ಸ್‌ ಮೂಲಕ ಕಮಾಲ್‌ ಮಾಡುತ್ತಿದ್ದಾನೆ.

ಇದೀಗ ಬಿಡುಗಡೆಯಾದ ಪ್ರೋಮೊದಲ್ಲಿ ಡಿಕೆಡಿ ತೀರ್ಪುಗಾರರಾಗಿರುವ ಅರ್ಜುನ್‌ ಜನ್ಯ ಅವರು ಪ್ರೀತಮ್‌ ಡ್ಯಾನ್ಸ್‌ ನೋಡಿ, ವೇದಿಕೆ ಬಂದು ಅಚ್ಚರಿ ಎಂಬಂತೆ ಬಂಗಾರದ ಬ್ರಾಸ್‌ಲೆಟ್ ಅನ್ನು ಪುಟಾಣಿಯ ಕೈಗೆ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅದರಲ್ಲೂ ನಿರೂಪಕಿ ಅನುಶ್ರೀ, ತೀರ್ಪುಗಾರರಾಗಿದ್ದ ರಚಿತಾ ರಾಮ್, ವಿಜಯ್‌ ರಾಘವೆಂದ್ರ ಹಾಗೂ ಕುಟುಂಬಸ್ಥರು ಅಚ್ಚರಿಕೊಂಡಿದ್ದಾರೆ. ಸದ್ಯ ಇದೆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅರ್ಜುನ್ ಜನ್ಯ ಅವರ ಉಡುಗೊರೆಯಾಗಿ ನೀಡಿದ್ದ ಬಂಗಾರದ ಬ್ರಾಸ್‌ಲೆಟ್ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.