ADVERTISEMENT

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 6:41 IST
Last Updated 19 ಫೆಬ್ರುವರಿ 2026, 6:41 IST
<div class="paragraphs"><p>ಗಿಚ್ಚಿ ಗಿಲಿಗಿಲಿ ಚಿಲ್ಲರ್ ಮಂಜು</p></div>

ಗಿಚ್ಚಿ ಗಿಲಿಗಿಲಿ ಚಿಲ್ಲರ್ ಮಂಜು

   

ಚಿತ್ರ: ಇನ್‌ಸ್ಟಾಗ್ರಾಂ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಮೂಲಕ ಖ್ಯಾತಿ ಪಡೆದುಕೊಂಡಿರುವ ಹಾಸ್ಯ ನಟ ಚಿಲ್ಲರ್ ಮಂಜು (ಮಂಜುನಾಥ್) ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬೆನ್ನಲ್ಲೆ ಚಿಲ್ಲರ್ ಮಂಜು ಅವರು ಕೂಡ ಜಂಟಿಯಾಗಿದ್ದಾರೆ.

ADVERTISEMENT

ಗಿಚ್ಚಿ ಗಿಲಿಗಿಲಿ ಚಿಲ್ಲರ್ ಮಂಜು

ಚಿಲ್ಲರ್‌ ಮಂಜು ಅವರು ಕಾರುಣ್ಯ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು (ಫೆಬ್ರುವರಿ 19) ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಇದೇ ಸಮಾರಂಭದ ಫೋಟೊಗಳನ್ನು ಮಂಜು ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿರುತೆರೆ ಕಲಾವಿದರು ಕೂಡ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಗಿಚ್ಚಿ ಗಿಲಿಗಿಲಿ ಚಿಲ್ಲರ್ ಮಂಜು

ಚಿಲ್ಲರ್‌ ಮಂಜು ಗ್ರಾಮೀಣ ಪ್ರತಿಭೆಯಾಗಿದ್ದು, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ತಮ್ಮ ಅದ್ಭುತ ಹಾಸ್ಯದ ಪಂಚ್‌ಗಳಿಂದ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು. ಸದ್ಯ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಕಾರುಣ್ಯ ಅವರ ಬಗ್ಗೆ ಚಿಲ್ಲರ್‌ ಮಂಜು ಅವರೇ ಮಾಹಿತಿ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.